DAKSHINA KANNADA
ಆಳ್ವಾಸ್ ವಿಧ್ಯಾರ್ಥಿನಿ ಆತ್ಮಹತ್ಯೆ
ಆಳ್ವಾಸ್ ವಿಧ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು ಜನವರಿ 24: ತರಗತಿಯ 5ನೇ ಮಹಡಿಯಿಂದ ಹಾರಿ ವಿಧ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಚಿತ್ರದುರ್ಗ ಮೂಲದ ರಚನಾ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ. ಕಾಲೇಜಿಗೆ ಸ್ಟಡಿ ಹಾಲಿಡೇಸ್ ಇರುವುದರಿಂದ ಲೈಬ್ರೆರಿಗೆ ಬಂದಿದ್ದ ರಚನಾ ಬಳಿಕ ತರಗತಿಯ 5 ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಪ್ರಥಮ ಪಿಯುಸಿಯಲ್ಲಿ ಉತ್ತಮ ಹೊಂದಿದ್ದು, ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿರುವುದು ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಡೆತ್ ನೋಟ್ ನಲ್ಲೂ ಇದೇ ವಿಷಯ ಬರೆದಿದ್ದಳು ಎಂದು ಕಾಲೇಜು ಮೂಲಗಳು ಮಾಹಿತಿ ನೀಡಿವೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login