Connect with us

    LATEST NEWS

    ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಮುಳುಗಿ ಮೂವರು ಸಹೋದರಿಯರು ಮೃತ್ಯು..!

    ಮೂವರು ಸಹೋದರಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಕೇರಳದ((palakkad)  ಪಾಲಕ್ಕಾಡಿನಲ್ಲಿ ಸಂಭವಿಸಿದೆ.

    ಪಾಲಕ್ಕಾಡ್ : ಮೂವರು ಸಹೋದರಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಕೇರಳದ(palakkad)  ಪಾಲಕ್ಕಾಡಿನಲ್ಲಿ ಸಂಭವಿಸಿದೆ.

    ರಮ್ಶೀನಾ (23), ನಶಿದಾ (26) ಮತ್ತು ರಿನ್ಶಿ (18) ನೀರಲ್ಲಿ ಮುಳುಗಿ ಸಾವನ್ನಪಿದ ದುರ್ದೈವಿಗಳಾಗಿದ್ದಾರೆ.

    ಮನ್ನಾರ್ಕಾಡ್ನ ಭೀಮನಾಡ್ ಪೆರುಂಕುಲಂನಲ್ಲಿ ಸ್ನಾನ ಮಾಡಲು ಅವರು ಹೋಗಿದ್ದರು.

    ಓಣಂ ರಜಾದಿನಗಳಿಗಾಗಿ ತಮ್ಮ ಮನೆಯಲ್ಲಿ ಜಮಾಯಿಸಿದವರು ತಮ್ಮ ತಂದೆಯ ಕಣ್ಣ ಮುಂದೆಯೇ ಮೃತಪಟ್ಟಿದ್ದಾರೆ.

    ಅವರ ತಂದೆ ಬಟ್ಟೆ ಒಗೆಯುತ್ತಿದ್ದಾಗ, ಅವರ ಪಕ್ಕದಲ್ಲಿ ಸ್ನಾನ ಮಾಡಲು ಹೋದ ಮಕ್ಕಳಲ್ಲಿ ಒಬ್ಬರು ನೀರಿನಲ್ಲಿ ಸಿಲುಕಿಕೊಂಡರು.

    ಅವರನ್ನು ಉಳಿಸಲು ಪ್ರಯತ್ನಿಸಿದ ಇತರ ಇಬ್ಬರು ಮುಳುಗಿದರು.ಅರ್ಧ ಗಂಟೆಯ ನಂತರ ಮೂವರನ್ನು ನೀರಿನಿಂದ ಹೊರತೆಗೆಯಲಾಯಿತು.

    ಸ್ಥಳೀಯರು ಮೂವರನ್ನು ಮನ್ನಾರ್ಕಾಡ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅವರಲ್ಲಿ ಇಬ್ಬರು ಆ ವೇಳೆಗೆ ಸಾವನ್ನಪ್ಪಿದ್ದರು.

    ಮೂರನೇಯವಳನ್ನು ಜೀವ ರಕ್ಷಕ ಸಾಧನದಲ್ಲಿ ಇರಿಸಲಾಯಿತಾದ್ರೂ ಉಳಿಸಲು ಸಾಧ್ಯವಾಗಲಿಲ್ಲ.

    ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದ್ದು ಪೋಷಕರ ಮತ್ತು ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ.

    Share Information
    Advertisement
    Click to comment

    You must be logged in to post a comment Login

    Leave a Reply