Connect with us

    LATEST NEWS

    ಪ್ರಯಾಣಿಕರ ಗಮನಕ್ಕೆ – ಜೂನ್ 10 ರಿಂದ ಕೊಂಕಣ್ ರೈಲ್ವೆ ಮಾರ್ಗದ ರೈಲುಗಳ ಸಮಯದಲ್ಲಿ ಬದಲಾವಣೆ

    ಮಂಗಳೂರು ಮೇ 11: ಮುಂಗಾರು ಮಳೆ ಪ್ರಾರಂಭವಾಗಲು ಇನ್ನು ಕೆಲವೇ ದಿನಗು ಬಾಕಿ ಇದ್ದು, ಪ್ರತಿಸಲದಂತೆ ಈ ಬಾರಿಯೂ ಕೊಂಕಣ್ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದ್ದು, ಪ್ರಯಾಣಿಕರು ತಮ್ಮ ರೈಲುಗಳ ವೇಳಾಪಟ್ಟಿಯನ್ನು ನ್ಯಾಷನಲ್‌ ಟ್ರೇನ್‌ ಎನ್‌ಕ್ವಯರಿ ಸಿಸ್ಟಂ ವೆಬ್‌ಸೈಟ್‌ (https://enquiry.indianrail.gov.in/mntes) ಸಂದರ್ಶಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಬದಲಾದ ಸಮಯ ಜೂನ್‌ 10ರಿಂದ ಅಕ್ಟೋಬರ್ 31ರ ವರೆಗೆ ಚಾಲ್ತಿಯಲ್ಲಿ ಇರಲಿದೆ.


    ಸಮಯ ಬದಲಾದ ರೈಲುಗಳು: ಎರ್ನಾಕುಳಂ ಜಂಕ್ಷನ್‌–ಪುಣೆ ಜಂಕ್ಷನ್‌ (ರೈಲು ಸಂಖ್ಯೆ: 22149) ಮತ್ತು ಎರ್ನಾಕುಳಂ ಜಂಕ್ಷನ್‌–ಹಜರತ್ ನಿಜಾಮುದ್ದೀನ್ ಜಂಕ್ಷನ್ (ರೈಲು ಸಂಖ್ಯೆ:22655) ರೈಲುಗಳು ಮುಂಜಾನೆ 5.15ರ ಬದಲು ಮುಂಜಾನೆ 2.15ಕ್ಕೆ ಹೊರಡಲಿವೆ. ಮಡಗಾಂವ್‌ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ (10107) ರೈಲು ಮುಂಜಾನೆ 4 ಗಂಟೆಯ ಬದಲು ಮುಂಜಾನೆ 4.40ಕ್ಕೆ ಹೊರಡಲಿದೆ. ಕೊಚ್ಚುವೇಲಿ–ಯೋಗ್ ನಗರಿ ಋಷಿಕೇಶ್ (22659), ಕೊಚ್ಚುವೇಲಿ–ಚಂಡೀಗಢ (12217), ಕೊಚ್ಚುವೇಲಿ–ಅಮೃತಸರ (12483) ರೈಲುಗಳು ಬೆಳಿಗ್ಗೆ 9.10ರ ಬದಲು ಮುಂಜಾನೆ 4.50ಕ್ಕೆ ಹೊರಡಲಿವೆ.

     

    ತಿರುನಲ್ವೇಲಿ ಜಂಕ್ಷನ್‌–ಜಾಮ್‌ನಗರ್ (19577) ಮತ್ತು ತಿರುನಲ್ವೇಲಿ ಜಂಕ್ಷನ್‌–ಗಾಂಧಿಧಾಮ್‌ (20923) ರೈಲುಗಳು ಬೆಳಿಗ್ಗೆ 8ರ ಬದಲು ಮುಂಜಾನೆ 5.15ಕ್ಕೆ, ಕೊಚ್ಚುವೇಲಿ–ಲೋಕಮಾನ್ಯ ತಿಲಕ್ ಟರ್ಮಿನಲ್‌ (‌12202) ರೈಲು ಬೆಳಿಗ್ಗೆ 9ರ ಬದಲು ಬೆಳಿಗ್ಗೆ 7.45ಕ್ಕೆ, ಮಡಗಾಂವ್ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ (06601) ರೈಲು ಮಧ್ಯಾಹ್ನ 2 ಗಂಟೆಯ ಬದಲಿಗೆ ಮಧ್ಯಾಹ್ನ 3 ಗಂಟೆಗೆ, ಮಡಗಾಂವ್ ಜಂಕ್ಷನ್‌–ಮಂಗಳೂರು ಸೆಂಟ್ರಲ್‌ (20645) ರೈಲು ಸಂಜೆ 6.10ರ ಬದಲು ಸಂಜೆ 5.35ಕ್ಕೆ, ಕೊಚ್ಚುವೇಲಿ–ಇಂದೋರ್ ಜಂಕ್ಷನ್ (20931) ಮತ್ತು ಕೊಚ್ಚುವೇಲಿ–ಪೋರ್‌ಬಂದರ್‌ (20909) ರೈಲು ಬೆಳಿಗ್ಗೆ 11.15ರ ಬದಲು ಬೆಳಿಗ್ಗೆ 9.10ಕ್ಕೆ ಹೊರಡಲಿದೆ.

     

    ಎರ್ನಾಕುಳಂ ಜಂಕ್ಷನ್‌–ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌ (12617) ರೈಲು ಮಧ್ಯಾಹ್ನ 1.25ರ ಬದಲು ಬೆಳಿಗ್ಗೆ 10.30ಕ್ಕೆ, ಕೊಯಮತ್ತೂರು ಜಂಕ್ಷನ್‌–ಹಿಸಾರ್‌ (22476) ರೈಲು ಮಧ್ಯಾಹ್ನ 2.55ರ ಬದಲು ಮಧ್ಯಾಹ್ನ 1.30ಕ್ಕೆ, ಮಂಗಳೂರು ಸೆಂಟ್ರಲ್‌–ಲೋಕಮಾನ್ಯ ತಿಲಕ್ ಟರ್ಮಿನಲ್ (12620) ರೈಲು ಮಧ್ಯಾಹ್ನ 2.20ರ ಬದಲು ಮಧ್ಯಾಹ್ನ 12.45ಕ್ಕೆ, ಎರ್ನಾಕುಳಂ ಜಂಕ್ಷನ್‌–ಮಡಗಾಂವ್ ಜಂಕ್ಷನ್‌ (10216) ರೈಲು ಬೆಳಿಗ್ಗೆ 10.40ರ ಬದಲು ಮಧ್ಯಾಹ್ನ 1.25ಕ್ಕೆ, ತಿರುವನಂತಪುರ ಸೆಂಟ್ರಲ್‌–ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌ (12431) ಸಂಜೆ 7.15ರ ಬದಲು ಮಧ್ಯಾಹ್ನ 2.40ಕ್ಕೆ, ಮಂಗಳೂರು ಜಂಕ್ಷನ್‌–ಮುಂಬೈ ಸಿಎಸ್‌ಟಿ (12134) ಮಧ್ಯಾಹ್ನ 2ರ ಬದಲು ಸಂಜೆ 4.35ಕ್ಕೆ, ಎರ್ನಾಕುಳಂ ಜಂಕ್ಷನ್‌–ಅಜ್ಮೀರ್‌ ಜಂಕ್ಷನ್‌ (12977) ರಾತ್ರಿ 8.25ರ ಬದಲು ಸಂಜೆ 6.50ಕ್ಕೆ, ಮಡಗಾಂವ್ ಜಂಕ್ಷನ್‌–ಎರ್ನಾಕುಳಂ ಜಂಕ್ಷನ್‌ (10215) ಸಂಜೆ 7.30ರ ಬದಲು ರಾತ್ರಿ 9ಕ್ಕೆ, ತಿರುವನಂತಪುರ ಸೆಂಟ್ರಲ್‌–ಹಜರತ್ ನಿಜಾಮುದ್ದೀನ್‌ ಜಂಕ್ಷನ್‌ ಶುಕರವಾರ ತಡರಾತ್ರಿ 12.50ರ ಬದಲು ಶುಕ್ರವಾರ ರಾತ್ರಿ 10 ಗಂಟೆಗೆ ಹೊರಡಲಿದೆ ಎಂದು ತಿಳಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply