Connect with us

  FILM

  ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ಅವರಿಗೆ 50 ಸಾವಿರ ಹಣ ನೀಡಿ ಸಹಾಯ ಮಾಡಿದ ನಟಿ ಜ್ಯೋತಿ ರೈ

  ಬೆಂಗಳೂರು ಮೇ 11: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆದ ಪ್ರಕರಣದಲ್ಲಿ ಮನನೊಂದಿರುವ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಾಮಾಜಿಕ ಕಾರ್ಯವನ್ನು ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ.


  ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತೆಲುಗಿನ ಜನಪ್ರಿಯ ಜನಪದ ಗಾಯಕ. ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮುಗಿಲಯ್ಯ ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಈಗ ನಟಿ ಜ್ಯೋತಿ ರೈ, ಮುಗಿಲಯ್ಯನ ನೆರವಿಗೆ ಧಾವಿಸಿದ್ದಾರೆ.


  ಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ಸಹ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದರು. ನಿನ್ನೆ ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತು. ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಬೆಳಗಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹಾಗಾಗಿ ಶೀಘ್ರವೇ ಅವರೊಟ್ಟಿಗೆ ಭೋಜನಕೂಟವನ್ನು ಏರ್ಪಿಸಿದೆ. ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ಮಾಡೋಣ’ ಎಂದಿದ್ದಾರೆ.

   

  Share Information
  Advertisement
  Click to comment

  You must be logged in to post a comment Login

  Leave a Reply