Connect with us

    LATEST NEWS

    ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಕೆಲಸಕ್ಕೆ ಹೊಯ್ತು 10.88 ಲಕ್ಷ….!!

    ಮಂಗಳೂರು ಅಗಸ್ಟ್ 31: ಆನ್ ಲೈನ್ ನಲ್ಲಿ ಪಾರ್ಟ್ ಟೈಂ ಕೆಲಸ ನಂಬಿ ವ್ಯಕ್ತಿಯೊಬ್ಬ ಬರೋಬ್ಬರಿ 10.88 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದ್ದು, ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಅಕ್ಯುಯೇಟ್ ಮೀಡಿಯಾ ಕಂಪೆನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ದೂರುದಾರರಿಗೆ ಅಗಸ್ಟ್ 26ರಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಟಾಸ್ಕ್ ಗಳ ಮೂಲಕ ದಿನನಿತ್ಯವೂ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶ ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಆತ ಹೇಳಿದಂತೆ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.

     

    ಆರಂಭದಲ್ಲಿ 1,000 ರೂ.ಗಳಿಂದ 3,000 ರೂ. ನಗದು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಮೊತ್ತದ ಹಣ ಜಮೆಯಾಗಿತ್ತು. ಆ ಬಳಿಕ ಆನ್ಲೈನ್ ನಲ್ಲಿ ಹಣ ಹೂಡಿಕೆಗೆ ಮತ್ತೆ ಒತ್ತಾಯಿಸಿದ್ದಾನೆ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆಗಸ್ಟ್ 28ರವರೆಗೆ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ ಆ ಬಳಿಕ ಯಾವುದೇ ಮೊತ್ತವನ್ನು ಮರುಪಾವತಿಸದೆ ವಂಚಿಸಿದ್ದಾನೆಂದು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply