Connect with us

    KARNATAKA

    ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ – ರಾಹುಲ್ ಗಾಂಧಿ

    ಶಿವಮೊಗ್ಗ ಮೇ 02: ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಪ್ರಜ್ವಲ್ ರೇವಣ್ಣ ಅವರನ್ನು ಮಾಸ್ ರೇಪಿಸ್ಟ್ ಎಂದು ಕರೆದಿದ್ದಾರೆ.


    ಶಿವಮೊಗ್ಗದ ಫ್ರೀಡಂ ಪಾರ್ಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅವರು ಪ್ರಚಾರ ನಡಸಿದ ರಾಹುಲ್ ಗಾಂಧಿ ನೂರಾರು ಜನ ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಬದಲಿಗೆ ಇದು ಸಮೂಹ ಅತ್ಯಾಚಾರವಾಗಿದೆ. ಈ ಪ್ರಕರಣ ಬಿಜೆಪಿಯವರಿಗೆ ಗೊತ್ತಿತ್ತು. ಆದರೂ ಪ್ರಧಾನಿ ಆದಿಯಾಗಿ ಆ ಪಕ್ಷದ ಮುಖಂಡರು ಪ್ರಜ್ವಲ್ ರೇವಣ್ಣ ಪರ ಮತ ಯಾಚಿಸಿದ್ದಾರೆ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಪ್ರಜ್ವಲ್ ರೇವಣ್ಣ ಅವರು 400ಕ್ಕೂ ಅಧಿಕ ಮಹಿಳೆಯರ ಅತ್ಯಾಚಾರ ಮಾಡಿದ್ದಾರೆ. ಎಂದ ಅವರು ಇದು ಸೆಕ್ಸ್ ಸ್ಕ್ಯಾಂಡಲ್ ಅಲ್ಲ ಇದೊಂದು ಸಾಮೂಹಿಕ ಅತ್ಯಾಚಾರ ವಾಗಿದ್ದು, ಪ್ರಧಾನಿ ಈ ರೇಪಿಸ್ಟ್ ಪರ ಮತಯಾಚಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply