Connect with us

    LATEST NEWS

    ರೈಲ್ವೆ ಹಳಿ ಮೇಲೆ ರೀಲ್ಸ್ ಹುಚ್ಚು – ರೈಲು ಬಡಿದು 20 ವರ್ಷದ ಯುವತಿ ಸಾವು

    ಹರಿದ್ವಾರ ಮೇ 02: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹುಚ್ಚು ಯುವತಿಯೊಬ್ಬಳ ಪ್ರಾಣವನ್ನೇ ತೆಗೆದಿದೆ. ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್ ಮಾಡುತ್ತಿರುವ ವೇಳೆ ರೈಲೊಂದು ಡಿಕ್ಕಿ ಹೊಡೆದು ಯುವತಿ ಸಾವನಪ್ಪಿದ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ನಡೆದಿದೆ.


    ಮೃತ ಯುವತಿಯನ್ನು 20 ವರ್ಷ ಪ್ರಾಯದ ವೈಶಾಲಿ ಎಂದು ಗುರುತಿಸಲಾಗಿದ್ದು, ಈಕೆ ಹರಿದ್ವಾರ ಜಿಲ್ಲೆಯ ಹರಿಪುರದವರು ಎಂದು ಗುರುತಿಸಲಾಗಿದೆ. ಈ ಘಟನೆ ಬುಧವಾರ ಸಂಜೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
    ವೈಶಾಲಿ ತನ್ನ ಗೆಳತಿಯೊಂದಿಗೆ ರಹೀಂಪುರದ ರೈಲ್ವೆ ಗೇಟ್ ಬಳಿ ನಿಂತು ರೀಲ್ಸ್ ಗಾಗಿ ವಿಡಿಯೋ ಮಾಡುತ್ತಿದ್ದಳು. ಈ ವೇಳೆ ಬಂದ ರೈಲು ವೈಶಾಲಿಗೆ ಡಿಕ್ಕಿ ಹೊಡೆದಿದ್ದು, ಈಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply