DAKSHINA KANNADA
ನಾಯಿ ಸೇರಿ ಸಾಕುಪ್ರಾಣಿಗಳಿಂದ ಆಗುವ ಯಾವುದೇ ಹಾನಿ, ನಡವಳಿಕೆಗೆ ಮಾಲೀಕರೇ ಜವಾಬ್ದಾರಿ: ಕರ್ನಾಟಕ ಹೈಕೋರ್ಟ್
ಬೆಂಗಳೂರು:ನಾಯಿ ಸೇರಿದಂತೆ ಸಾಕುಪ್ರಾಣಿಗಳಿಂದಾಗುವ ಯಾವುದೇ ಬೇಜವಾಬ್ದಾರಿಯುತ ನಡವಳಿಕೆಗೆ ಆಯಾ ಪ್ರಾಣಿಗಳ ಮಾಲೀಕರೇ ಜವಾಬ್ದಾರಿಯಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಜನರಿಗೆ ಗಾಯವನ್ನುಂಟುಮಾಡುವುದು ಕೇವಲ ಅಪಾಯಕಾರಿ ತಳಿಯ ಶ್ವಾನಗಳು ಮಾತ್ರವಲ್ಲ, ಯಾವುದೇ ನಾಯಿಯೂ ಉಗ್ರವಾಗಬಹುದು ಎಂಬುದನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಸಾಕುಪ್ರಾಣಿಗಳ ಮಾಲೀಕರ ಜವಾಬ್ದಾರಿಯನ್ನು ನಿಗದಿಪಡಿಸಲು ಸಂಬಂಧಿತ ನಿಯಮಗಳ ಅಡಿಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸುವುದು ಅಗತ್ಯ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಮೂರು ನಿಯಮಗಳಾದ ಪ್ರಾಣಿಗಳ ಜನನ ನಿಯಂತ್ರಣ (ನಾಯಿಗಳು) ನಿಯಮಗಳು, 2001, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ನಾಯಿ ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ) ನಿಯಮಗಳು, 2017 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ (ಪೆಟ್ ಶಾಪ್) ನಿಯಮಗಳು, 2018 ಅಡಿಯಲ್ಲಿ ಅಂತಹ ಮಾರ್ಗಸೂಚಿಗಳನ್ನು ನೀಡಲು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.’ನಾಯಿ ಕಚ್ಚಿದರೆ ಅದು ಯಾವುದೇ ನಾಯಿಯಾಗಿದ್ದರೂ ಅದು ನಾಯಿ ಕಚ್ಚಿದ್ದೇ ಆಗಿರುತ್ತದೆ. ಅದು ಬ್ರಾಂಡೆಡ್ ಅಪಾಯಕಾರಿ ನಾಯಿ ಅಥವಾ ಇತರ ಯಾವುದೇ ಸಾಮಾನ್ಯ ನಾಯಿಯಾಗಿರಬಹುದು. ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳ ಕೃತ್ಯಕ್ಕೆ ಸಂಪೂರ್ಣವಾಗಿ ಜವಾಬ್ದಾರರಾಗುತ್ತಾರೆ. ಸಾಕುಪ್ರಾಣಿಗಳ ಮಾಲೀಕರು ಜವಾಬ್ದಾರಿಯುತವಾಗಿ ವರ್ತಿಸಬೇಕು.ಸೂಕ್ತವಾಗಿ ರಚಿಸಲಾದ ಸಮಿತಿಯು ಜವಾಬ್ದಾರಿಯುತ ಸಾಕುಪ್ರಾಣಿಗಳ ಮಾಲೀಕತ್ವದ ಪರಿಕಲ್ಪನೆಯನ್ನು ರಕ್ಷಿಸಬೇಕು ಮತ್ತು ಬೇಜವಾಬ್ದಾರಿಯುತ ಸಾಕುಪ್ರಾಣಿ ಮಾಲೀಕತ್ವವನ್ನು ದಂಡನೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತಿಳಿಸಿದ್ದಾರೆ.
ಇದನ್ನೂ ಓದಿ…
You must be logged in to post a comment Login