ಉತ್ತರ ಪ್ರದೇಶದಲ್ಲಿ 3500 ಟನ್ ಚಿನ್ನದ ನಿಕ್ಷೇಪ ಪತ್ತೆ ಇದು ಶ್ರೀರಾಮನ ಕೃಪೆ

ಉತ್ತರ ಪ್ರದೇಶ ಫೆಬ್ರವರಿ 22: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಣಿಯಾಗುತ್ತಿದ್ದಂತೆ ಕುಸಿಯುತ್ತಿರುವ ದೇಶದ ಆರ್ಥಿಕ ಸ್ಥಿತಿ-ಗತಿಗೆ ಶ್ರೀರಾಮ ಚಂದ್ರ ಕೃಪೆ ತೋರಿದ್ದಾನೆ.

ಉತ್ತರ‌ಪ್ರದೇಶದ ಸೋನ್ ಬಂದ್ರಾ ಜಿಲ್ಲೆಯ ಹಲವು ಕಡೆಗಳಲ್ಲಿ ಸುಮಾರು‌ 3500 ಟನ್ ಗಳಷ್ಟು ಚಿನ್ನದ ನಿಕ್ಷೇಪವನ್ನು ಭಾರತೀಯ ಭೂಗರ್ಭ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ದೊರೆತಿರುವುದು ದೇಶದ ಆರ್ಥಿಕ ಸ್ಥಿತಿಯ ಉತ್ತೇಜನಕ್ಕೆ ಬೂಸ್ಟ್ ಸಿಕ್ಕಿದಂತಾಗಿದೆ.

ಅಯೋಧ್ಯೆಯಲ್ಲಿ ರಾಮ ನಿರ್ಮಾಣದ ಕಾಮಗಾರಿ ಆರಂಭಗೊಳ್ಳುವ ಹಂತದಲ್ಲೆ ಈ ಚಿನ್ನದ ನಿಕ್ಷೇಪ ದೊರತಿರುವುದು ಶ್ರೀರಾಮಚಂದ್ರನ ಕೃಪೆ ಎನ್ನಲಾಗುತ್ತಿದೆ.