ಮಂಗಳೂರಿನಲ್ಲಿ ಉದ್ಘಾಟನೆಗೆ ಸಿದ್ದವಾದ ಕೊಂಕಣ್ ರೈಲ್ವೆ ರೂವಾರಿ ಜಾರ್ಜ್ ಫೆರ್ನಾಂಡಿಸ್ ಸ್ಮಾರಕ

ಮಂಗಳೂರು ಫೆ.22: ಕೊಂಕಣ್ ರೈಲ್ವೆಯ ರೂವಾರಿ ಕರಾವಳಿಯ ಮಣ್ಣಿನ ಮಗ ಹಿರಿಯ ರಾಜಕಾರಣಿ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಸ್ಮರಣಾರ್ಥ ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು ಫೆಬ್ರವರಿ 23 ರಂದು ಉದ್ಘಾಟನೆಗೊಳ್ಳಲಿದೆ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ವಿಧಿವಶರಾಗಿದ್ದರು. 88 ವರ್ಷದ ಜಾರ್ಜ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆದಿತ್ತು, ಅಲ್ಲಿಂದ ಚಿತಾಭಸ್ಮ ತಂದು ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಮಂಗಳೂರಿನ ಬೇಜಾಯ್ ಚರ್ಚ್ ನಲ್ಲಿ ಜಾರ್ಜ್ ಅವರ ಸ್ಮಾರಕ ಸಿದ್ಧವಾಗಿದ್ದು, ಭಾನುವಾರ ಬೆಳಗ್ಗೆ 8 ಗಂಟೆಗೆ ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನಾ ಉದ್ಘಾಟಿಸಲಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ್ ಕಾಮತ್, ಎಂಎಲ್ ಸಿ ಐವಾನ್ ಜಡಿಸೋಜಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.