Connect with us

  DAKSHINA KANNADA

  ಬ್ರಹ್ಮಶ್ರೀ ನಾರಾಯಣ ಗುರುವರ್ಯರನ್ನು ಮೋದಿಜಿ ಗೌರವಿಸಿದ್ದನ್ನು ವ್ಯತಿರಿಕ್ತವಾದ ರಾಜಕೀಯಕ್ಕೆ ಬಳಸಿದ ಪದ್ಮರಾಜ್ ನಡೆಗೆ ದ.ಕ. ಬಿಜೆಪಿ ಖೇದ

  ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುವರ್ಯರನ್ನು ಮೋದಿಜಿ ಅವರು ಗೌರವಿಸಿದ್ದನ್ನು ವ್ಯತಿರಿಕ್ತವಾದ ರಾಜಕೀಯಕ್ಕೆ ಬಳಸಿದ ಕಾಂಗ್ರೆಸ್  ಅಭ್ಯರ್ಥಿ ಪದ್ಮರಾಜ್ ನಡೆಗೆ ದ.ಕ. ಬಿಜೆಪಿ ಖೇದ ವ್ಯಕ್ತಪಡಿಸಿದ್ದಾರೆ.

  ಮೋದಿಜಿ ಅವರು ನಾರಾಯಣ ಗುರುಗಳ ನಾಮಸ್ಮರಣೆಯನ್ನು ಸಂಘದ ಕೆಲಸ ಮಾಡುತ್ತಾ ಸ್ವಯಂಸೇವಕರು ಪ್ರತಿದಿನ ಬೆಳಿಗ್ಗಿನ ಜಾವದಲ್ಲಿ ಪಠಿಸುವ ಏಕಾತ್ಮತಾ ಸ್ತೋತ್ರದಲ್ಲಿ ಬರುವ 30 ನೇ ಶ್ಲೋಕದಲ್ಲಿ “ನಾರ‍ಾಯಣ ಗುರುಗಳ” ಸ್ಮರಣೆಯನ್ನು ಸದಾ ಮಾಡುತ್ತಾ ಬಂದಿದ್ದಾರೆ. ನಾರಾಯಣ ಗುರುಗಳು ಹಾಗೂ ಅವರ ಅಸ್ಪರ್ಶ್ಯತೆಯ ವಿರುದ್ದ ಸಾರಿದ ಸಂದೇಶ ವಿಶ್ವಮಾನ್ಯವಾಗಿದೆ ಹಾಗೂ ವಿಶ್ವದಾದ್ಯಂತ ಹಲವಾರು ಅನುಯಾಯಿಗಳೂ ಇದ್ದಾರೆ. ಅಂತಹ ಹಲವು ಅನುಯಾಯಿಗಳಲ್ಲಿ ಮೋದಿಜಿ ಅವರೂ ಒಬ್ಬರು. ನಮ್ಮ ನಾಡು ಕಂಡ ಶ್ರೇಷ್ಠ ಸಂತರನ್ನು ಗೌರವಿಸಿದ ಈ ಸಂಧರ್ಭ ಹಾಗೂ ಅವರ ವಿನೀತ ಭಾವ ಇವೆಲ್ಲವೂ ಅನುಕರಣೀಯವಾಗಿದೆ.
  ಆದರೆ ಇದೇ ಕಾಂಗ್ರೇಸ್ಸಿಗರು ಮೋದಿಜಿಯವರು ಗೌರವಿಸಿದ ನಾರಾಯಣ ಗುರು ಸರ್ಕಲಿನಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಒಮ್ಮೆಯಾದರೂ ಭೇಟಿ ನೀಡಿ ಗೌರವಿಸಿದ್ದೀರಾ…? ಮಾಲ್ಯಾರ್ಪಣೆ ಮಾಡಿದ್ದೀರಾ….? ಇಲ್ಲತಾನೇ….! ಆದರೆ ಪದ್ಮರಾಜ್ ಹಾಗೂ ಕಾಂಗ್ರೇಸ್ ನವರು ಬ್ರಹ್ಮಶ್ರೀ ನಾರಾಯಣ ಗುರುವರ್ಯರನ್ನು ರಾಜಕೀಯಕ್ಕಾಗಿ ಬಳಸಿಕೊಂಡಿರುವ ವಿಷಯವು ಅತ್ಯಂತ ಖೇದಕರ. ನೀವು ನಿಜವಾಗಿ ಜಂಟಲ್ ಮ್ಯಾನ್ ಆಗಿದ್ದಿದ್ದರೆ ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಗೆ ಗೌರವಾರ್ಪಣೆ ಮಾಡಿದ್ದಕ್ಕೆ ನೀವು ಅಸುಯೆ ಇಂದ ಕರುಬುವ ಬದಲು ಅಭಿವಾದನ ನೀಡಬೇಕಿತ್ತು. ನಾರಾಯಣ ಗುರುಗಳಿಗೆ ಗೌರವಾದರಗಳನ್ನು ಅರ್ಪಿಸಿ ಬ್ರಹ್ಮರ್ಷಿ ನಾರಾಯಣ ಗುರು ಸರ್ಕಲ್ ಅನ್ನು ಜಗದ್ವಿಖ್ಯಾತ ಮಾಡಿದ್ದಕ್ಕಾರೂ ನೀವು ಪ್ರಧಾನಿಯವರನ್ನು ಗೌರವಿಸಬೇಕಿತ್ತು. ಅದನ್ನು ಬಿಟ್ಟು ಕೀಳುಮಟ್ಟದ ರಾಜಕೀಯವನ್ನು ಹುಡುಕಿದ್ದು ಪದ್ಮರಾಜ್ ಅವರ ಗೌರವಕ್ಕೆ ತರವಲ್ಲಾ. ನಿಮಗೆ ಆ ನಾರಾಯಣ ಗುರುಗಳು ಒಳ್ಳೆಯ ಮನಸ್ಸನ್ನು ಹಾಗೂ ಸಹೃದಯತೆಯನ್ನು ದಯಪಾಲಿಸಲಿ ಅಂತ ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತೇವೆ.
  ನಾವೆಲ್ಲರು “ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ದೇವರೆಲ್ಲಾ ಒಂದೇ” ನಾಮ ಮಾತ್ರ ಹಲವು ಎಂಬ ಹಿಂದುತ್ವದ ಬಂಧುತ್ವವನ್ನು ಸಾರುವ ತತ್ವಗಳಿಂದ ಪ್ರೇರಿತರಾಗಿ ರಾಷ್ಟ್ರ ಕಾರ್ಯದಲ್ಲಿ ತತ್ಪರರಾಗಿದ್ದೇವೆ. ಹಾಗೂ ಈ ಧ್ಯೇಯವನ್ನೇ ಪ್ರಧಾನವನ್ನಾಗಿಟ್ಟು ಅಂತಿಮ ಉಸಿರಿರುವವರೆಗೂ ಭಾರತ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತೇವೆ ಎಂದು ಬಿಜೆಪಿ ದಕ್ಷಿಣ ಕನ್ನಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

  Share Information
  Advertisement
  Click to comment

  You must be logged in to post a comment Login

  Leave a Reply