Connect with us

    LATEST NEWS

    ಸೆಕೆಂಡ್ ಹ್ಯಾಂಡ್ ಕಾರಿನ ಮಾರಾಟದ ಗಲಾಟೆ – 1 ಕೋಟಿಯ ಲ್ಯಾಂಬೋರ್ಗಿನಿಗೆ ರಸ್ತೆ ಮಧ್ಯೆ ಬೆಂಕಿ ಹಂಚಿದ ಗಿರಾಕಿ

    ಹೈದರಾಬಾದ್ ಎಪ್ರಿಲ್ 16: ಸೆಕೆಂಡ್ ಹ್ಯಾಂಡ್ ಕಾರಿನ ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ತಂಡವೊಂದು 1 ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರಿಗೆ ರಸ್ತೆ ಮಧ್ಯೆಯೆ ಬೆಂಕಿ ಹಚ್ಚಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.


    ಪೊಲೀಸರ ಪ್ರಕಾರ, ಹಳೆಯ ಕಾರುಗಳ ಮಾರಾಟ ಮತ್ತು ಖರೀದಿಯಲ್ಲಿ ವ್ಯವಹರಿಸುತ್ತಿರುವ ವ್ಯಕ್ತಿ ಮತ್ತು ಪ್ರತಿಷ್ಠಿತ ಐಷಾರಾಮಿ ಸ್ಪೋರ್ಟ್ಸ್ ಕಾರಿನ ಮಾಲೀಕರ ನಡುವಿನ ಗಲಾಟೆಗೆ ಉದ್ದೇಶಪೂರ್ವಕವಾಗಿಯೇ ಕಾರಿಗೆ ಬೆಂಕಿ ಹಚ್ಚಲಾಗಿದೆ.

    2009 ರ ಲ್ಯಾಂಬೋರ್ಗಿನಿ ಕಾರನ್ನು ಮಾಲಕರು ಮಾರಾಟ ಮಾಡಲು ಬಯಸಿದ್ದಾರೆ. ಈ ವೇಳೆ ಖರೀದಿದಾರರನ್ನು ಹುಡುಕಲು ತನ್ನ ಪ್ರೆಂಡ್ಸ್ ಗಳಿಗೆ ಹೇಳಿದ್ದರು. ಈ ವೇಳೆ ಪ್ರಮುಖ ಆರೋಪಿ ಮಾಲೀಕನ ಸ್ನೇಹಿತನಿಗೆ ಕರೆ ಮಾಡಿ ಕಾರು ತರುವಂತೆ ಹೇಳಿದ್ದ. ಕಾರಿನ ಮಾಲೀಕನ ಸ್ನೇಹಿತ ಪ್ರಮುಖ ಆರೋಪಿಗೆ ಪರಿಚಿತನಾಗಿದ್ದನು. ಏಪ್ರಿಲ್ 13 ರಂದು ನಗರದ ಹೊರವಲಯದಲ್ಲಿರುವ ಮಾಮಿಡಿಪಲ್ಲಿ ರಸ್ತೆಗೆ ಕಾರನ್ನು ತಂದಾಗ, ಅನುಮಾನಾಸ್ಪದ ವ್ಯಕ್ತಿ ಇತರರೊಂದಿಗೆ ಸೇರಿಕೊಂಡು, ಕಾರಿನ ಮಾಲೀಕರೊಂದಿಗೆ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply