Connect with us

    DAKSHINA KANNADA

    ಮಂಗಳೂರು : ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್ ಆದ್ರೆ ತುಳುನಾಡ ಜನರ ಬೆಂಬಲ ಇಲ್ಲ ..!

    ರಾಜ್ಯದಲ್ಲಿ ಬರ ಆವರಿಸಿದ್ದು ಈ ಮಧ್ಯೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ವಿರೋಧಿಸಿ ನಾಳೆ ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್​ಗೆ ಕರೆ ನೀಡಿದೆ. ದಕ್ಷಿಣ ಕನ್ನಡದಲ್ಲಿ ಮಾತ್ರ ಬಂದ್ ಗೆ ಬೆಂಬಲ ವ್ಯಕ್ತವಾಗಿಲ್ಲ.
    ಮಂಗಳೂರು: ರಾಜ್ಯದಲ್ಲಿ ಬರ ಆವರಿಸಿದ್ದು ಈ ಮಧ್ಯೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ವಿರೋಧಿಸಿ ನಾಳೆ ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್​ಗೆ ಕರೆ ನೀಡಿದೆ. ದಕ್ಷಿಣ ಕನ್ನಡದಲ್ಲಿ ಮಾತ್ರ ಬಂದ್ ಗೆ ಬೆಂಬಲ ವ್ಯಕ್ತವಾಗಿಲ್ಲ.

    ಸರ್ಕಾರದ ಮನವಿಗೂ ಕನ್ನಡ ಪರ ಮತ್ತು ರೈತ ಸಂಘಟನೆಗಳು ಮಣಿಯದೆ ನಾಳೆ ಶುಕ್ರವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಬಂದ್ ನಿರ್ಧಾರವನ್ನು ಕೈಬಿಡಲು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

    ಆದ್ರೆ ಇದರ ಹೊಇರತಾಗಿಯೂ ಕನ್ನಡಪರ ಮತ್ತು ರೈತ ಪರ ಸಂಘಟನೆಗಳು ಬಂದ್ ಮಾಡಲು ನಿರ್ಧರಿಸಿವೆ.

    ಆದ್ರೆ ಈ ನಿರ್ಧಾರಕ್ಕೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಜಿಲ್ಲೆಯ ಯಾವುದೇ ಸಂಘಟನೆಗಳು ಕರ್ನಾಟಕ ರಾಜ್ಯ ಬಂದ್​ಗೆ ಬೆಂಬಲ ಸೂಚಿಸಿಲ್ಲ.

    ದಕ್ಷಿಣ ಕನ್ನಡದಲ್ಲಿ ಬ್ಯಾಂಕ್, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ನಿರಾತಂಕವಾಗಿ ನಡೆಯಲಿವೆ.

    ಸರ್ಕಾರಿ ಮತ್ತು ಖಾಸಾಗಿ ಸಾರಿಗೆ ಸಂಚಾರ ಕೂಡ ನಾಳೆ ಯಥಾ ಸ್ಥಿತಿಯಲ್ಲಿರಲಿದೆ.

    ಖಾಸಗಿ ಬಸ್ ಮಾಲೀಕರು ಕರ್ನಾಟಕ ರಾಜ್ಯ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರೂ ಬಸ್​ಗಳ ಓಡಾಟವನ್ನು ನಡೆಸಲು ನಿರ್ಧರಿಸಿದ್ದಾರೆ.

    ಧರಣಿಯ ಮೂಲಕ ಬೆಂಬಲವನ್ನು ಒಂದು ವಿದ್ಯಾರ್ಥಿ ಸಂಘ ಘೋಷಿಸಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಜಿಲ್ಲೆಯ ಹೋರಾಟಗಾರರು ಕಾವೇರಿ ಸಮಸ್ಯೆ ಸ್ಥಳೀಯ ‌ಮಟ್ಟದಲ್ಲಿ ಹೋರಾಟಗಳಾಗುತ್ತದೆ.

    ದಕ್ಷಿಣ ಕನ್ನಡ ಮತ್ತು ‌ಉಡುಪಿ ಜಿಲ್ಲೆಯ ವಿಷಯ ಬಂದಾಗ ಎತ್ತಿನಹೊಳೆ ಬೇಡ ಎಂದಾಗ ಅಲ್ಲಿನ‌ ಜನರು ಬೇಕು” ಎಂದು ಪ್ರತಿಪಾದಿಸಿದರು.

    ”ತುಳು ರಾಜ್ಯದ ಎರಡನೇ ‌ಭಾಷೆ ಆಗಬೇಕೆಂದು ಚರ್ಚೆ ಹುಟ್ಟಿದಾಗ ಸದನದಲ್ಲಿ ದೈವ ದೇವರ ವಿಚಾರವನ್ನು ತಮಾಷೆ ಮಾಡಿದರು. ಆದ್ದರಿಂದ ನೈತಿಕವಾಗಿ ‌ಬೆಂಬಲ ಇದೆ ಆದ್ರೆ ಪ್ರತಿಭಟನೆ ‌ಮಾಡುವುದಿಲ್ಲ ಎಂದಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply