Connect with us

  LATEST NEWS

  ಮಧ್ಯಪ್ರದೇಶ ಅಪ್ರಾಪ್ತೆಯ ಗ್ಯಾಂಗ್ ರೇಪ್ ಪ್ರಕರಣ : ಆಟೋ ಚಾಲಕ ಸೇರಿ ನಾಲ್ವರ ಬಂಧನ..!

  ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಮಧ್ಯಪ್ರದೇಶದ ಉಜ್ಜಯನಿಯಲ್ಲಿ 12 ವರ್ಷದ ಬಾಲಕಿ ಅತ್ಯಾಚಾರದ ಆಘಾತಕಾರಿ ಪ್ರಕರಣದಲ್ಲಿ ಆಟೋ ಚಾಲಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

  ಉಜ್ಜಯಿನಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಮಧ್ಯಪ್ರದೇಶದ ಉಜ್ಜಯನಿಯಲ್ಲಿ 12 ವರ್ಷದ ಬಾಲಕಿ ಅತ್ಯಾಚಾರದ ಆಘಾತಕಾರಿ ಪ್ರಕರಣದಲ್ಲಿ ಆಟೋ ಚಾಲಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

  ಬಂಧಿತ ಆಟೋ ಚಾಲಕನನ್ನು 38 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ.

  ಜೀವನ್ ಖೇರಿಯಲ್ಲಿ ಬಾಲಕಿ ಆಟೋ ಹತ್ತಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋದ ಹಿಂಬದಿಯ ಸೀಟಿನ ಮೇಲೆ ರಕ್ತದ ಕಲೆಗಳು ಕೂಡ ಪತ್ತೆಯಾಗಿವೆ.

  ವಿಧಿ ವಿಜ್ಞಾನ ತಜ್ಞರು ಇದರ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಕೆಲವು ತಾಂತ್ರಿಕ ಪುರಾವೆಗಳು ದೊರಕಿವೆ. ಇನ್ನು ಕೆಲವು ಹೊಸ ಸಿಸಿಟಿವಿ ದೃಶ್ಯಾವಳಿಗಳು ಲಭಿಸಿವೆ.

  ಅವುಗಳ ಆಧಾರದಲ್ಲಿ, ಉಜ್ಜಯಿನಿಯಲ್ಲಿ ಓಡಾಡುತ್ತಿದ್ದ ಬಾಲಕಿಯ ಸಂಪರ್ಕಕ್ಕೆ ಬಂದಿದ್ದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ” ಎಂದು ಉಜ್ಜಯಿನಿ ಎಸ್‌ಪಿ ಸಚಿನ್ ಶರ್ಮಾ ತಿಳಿಸಿದ್ದಾರೆ.

  “ಬಾಲಕಿಯು ಸತ್ನಾದ ಜೆತ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯವಳಾಗಿದ್ದು, ಸೆಪ್ಟೆಂಬರ್ 24ರಂದು ಈಕೆ ನಾಪತ್ತೆಯಾಗಿರುವ ಕುರಿತು ಬಾಲಕಿಯ ಅಜ್ಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತಿಳಿದುಬಂದಿದೆ.

  ಸೆ 24ರಂದು ಸತ್ನಾದಿಂದ ಹೊರಟಿದ್ದ ಆಕೆ, ಮರುದಿನ ಉಜ್ಜಯಿನಿ ತಲುಪಿದ್ದಳು.

  ಆಕೆ ಓಡಾಡಿದ್ದ ಮಾರ್ಗದ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಶರ್ಮಾ ಹೇಳಿದ್ದಾರೆ.

  ಬೇರೆ ಬೇರೆ ಜಾಗಗಳಲ್ಲಿ ಆಕೆ ಐದು ಮಂದಿಯನ್ನು ಭೇಟಿ ಮಾಡಿರುವುದು ಕಂಡುಬಂದಿದೆ. ಅವರೆಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  ಬಾಲಕಿಯ ಕುಟುಂಬವು ಸತ್ನಾದಿಂದ ಇಂದೋರ್‌ಗೆ ತಲುಪಿದೆ. ಆದರೆ ಗುರುವಾರ ಮಧ್ಯಾಹ್ನದವರೆಗೂ ಆಕೆಯ ಭೇಟಿಗೆ ಅವಕಾಶ ನೀಡಿರಲಿಲ್ಲ.

  ಬಾಲಕಿಯ ತಂದೆ ಮಾನಸಿಕ ಅಸ್ವಸ್ಥನಾಗಿದ್ದು, ಬಾಲಕಿಯ ಬಾಲ್ಯದಿಂದಲೂ ಆಕೆಯ ತಾಯಿ ಜತೆಗೆ ವಾಸಿಸುತ್ತಿರಲಿಲ್ಲ.

  8ನೇ ತರಗತಿ ಓದಿರುವ ಆಕೆ, ಹಳ್ಳಿಯಲ್ಲಿ ಅಜ್ಜ ಮತ್ತು ಅಣ್ಣನ ಜತೆ ವಾಸವಿದ್ದಳು. ಉಜ್ಜಯಿನಿಯಲ್ಲಿ ಅಲೆಯುತ್ತಿದ್ದ ಆಕೆಯ ಮೇಲೆ ಅಪರಿಚಿತರು ಅತ್ಯಾಚಾರ ಎಸಗಿದ್ದರು.

  ಅರೆ ನಗ್ನಾವಸ್ಥೆಯಲ್ಲಿದ್ದ ಬಾಲಕಿ, ಬೀದಿ ಬೀದಿಯಲ್ಲಿ ಸಹಾಯಕ್ಕಾಗಿ ಯಾಚಿಸುತ್ತಾ ಓಡಾಡುತ್ತಿದ್ದಳು. ಆಕೆ ಸಹಾಯಕ್ಕೆ ಕೋರುತ್ತಾ ಸುಮಾರು 8 ಕಿಮೀ ನಡೆದಿದ್ದಳು ಎಂದು ಹೇಳಲಾಗಿದೆ.

  ಆಕೆಯ ದೇಹದಿಂದ ರಕ್ತ ಸುರಿಯುತ್ತಿತ್ತು. ಆದರೆ ಯಾರೂ ಆಕೆಯ ನೆರವಿಗೆ ಧಾವಿಸಿರಲಿಲ್ಲ. ಕೊನೆಗೆ ಆಶ್ರಮವೊಂದರ ಅರ್ಚಕರೊಬ್ಬರು ಆಕೆಗೆ ಬಟ್ಟೆ ಸುತ್ತಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply