MANGALORE
ಗಾಂಜಾ ಮಾರಾಟ ಯತ್ನ: ಯುವಕನ ಸೆರೆ
ಗಾಂಜಾ ಮಾರಾಟ ಯತ್ನ: ಯುವಕನ ಸೆರೆ
ಮಂಗಳೂರು, ಅಕ್ಟೋಬರ್ 20 : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಮಂಗಳೂರು ಇಕನಾಮಿಕ್ ಮತ್ತು ನಾರ್ಕೋಟಿಕ್ಸ್ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಕುದ್ರೊಳಿಯ ಮಹಮ್ಮದ್ ನೌಫಲ್ ಎಂದು ಗುರುತ್ತಿಸಲಾಗಿದ್ದು , ಆತನಿಂದ 5,600 ರೂಪಾಯಿ ಮೌಲ್ಯದ 245 ಗ್ರಾಂ ನಿಸೇಧಿತ ವಸ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ ಗಸ್ತು ನಿರತ ಪೋಲಿಸರಿಗೆ ಕುದ್ರೊಳಿ ಟಿಪ್ಪು ಸುಲ್ತಾನ್ ನಗರದ ಬಳಿ ಸಂಶಯಾಸ್ಪದವಾಗಿ ಅಡ್ಡಾಡುತ್ತಿದ್ದ ಮಹಮ್ಮದ್ ನೌಫಲನನ್ನು ಪೋಲಿಸರು ಹಿಡಿದು ವಿಚಾರಿಸಿದಾಗ ಆತನ ಈ ಕೃತ್ಯ ಬಯಲಾಗಿದೆ.
You must be logged in to post a comment Login