Connect with us

    DAKSHINA KANNADA

    ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಫೀಸ್ ಬರೆ, ನಿಲ್ಲಬೇಕಿದೆ ಹಗಲು ದರೋಡೆಯ ಈ ಹೊರೆ

    ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಫೀಸ್ ಬರೆ, ನಿಲ್ಲಬೇಕಿದೆ ಈ ಹಗಲು ದರೋಡೆಯ ಹೊರೆ

    ಮಂಗಳೂರು,ಅಕ್ಟೋಬರ್ 20: ಮಾಲ್ ಗಳಿಗೆ ಬರುವ ಗ್ರಾಹಕರ ವಾಹನಗಳಿಂದ ಸಂಗ್ರಹಿಸುವ ಶುಲ್ಕ ಕಾನೂನು ಬಾಹಿರ ಎಂದು ಹೈದರಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶದ ಇಫೆಕ್ಟ್ ಮಂಗಳೂರಿನ ಸಿಟಿ ಸೆಂಟರ್ ಮೇಲೂ ಆಗುವ ಸಾಧ್ಯತೆ ಹೆಚ್ಚಾಗಿದೆ.ಸಿಟಿ ಸೆಂಟರ್ ಗೆ ಬರುವಂತಹ ಗ್ರಾಹಕರ ವಾಹನಗಳಿಗೆ ಪಾರ್ಕಿಂಗ್ ಶುಲ್ಕವನ್ನು ಪಡೆಯಲಾಗುತ್ತಿದ್ದು, ಹೈದರಾಬಾದ್ ಹೈಕೋರ್ಟ್ ಆದೇಶದ ಪ್ರಕಾರ ಇದೂ ಕೂಡಾ ಕಾನೂನುಬಾಹಿರ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

    ಹೈದರಾಬಾದ್ ನಿವಾಸಿ ವಿಜಯ್ ಗೋಪಾಲ್ ತನ್ನ ವಾಹನವನ್ನು Inorbit ಎನ್ನುವ ಮಾಲ್ ನಲ್ಲಿ 10 ನಿಮಿಷಗಳ ಕಾಲ ಪಾರ್ಕ್ ಮಾಡಿದ್ದು, ಇದಕ್ಕೆ ಮಾಲ್ ಸಿಬ್ಬಂದಿ 30 ರೂಪಾಯಿಗಳ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡಿದ್ದರು.

    ಈ ಬಗ್ಗೆ ವಿಜಯ್ ಗೋಪಾಲ್ ಅಗಸ್ಟ್ 26 ರಂದು ಹೈದರಾಬಾದ್ ನ ಮಧುಪುರ ಪೋಲೀಸ್ ಠಾಣೆಯಲ್ಲಿ ಮಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೋಲೀಸರು ಈ ಸಂಬಂಧ ಮಾಲ್ ವಿರುದ್ಧ ಸೆಕ್ಷನ್ 188, 418 ಹಾಗೂ 420 ಕೇಸು ದಾಖಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಹೈಕೋರ್ಟ್ ಮಾಲ್ ಗಳು ಯಾವುದೇ ಕಾರಣಕ್ಕೂ ಗ್ರಾಹಕನಿಂದ ವಾಹನದ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ಕಾನೂನು ಪ್ರಕಾರವೂ ಪ್ರತಿ ಕಟ್ಟಡವೂ ತನ್ನ ಕಟ್ಟಡಕ್ಕೆ ಗ್ರಾಹಕರಾಗಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದು ಕಡ್ಡಾಯವಾಗಿದ್ದು, ಇದಕ್ಕೆ ಶುಲ್ಕ ವಸೂಲಿ ಮಾಡುವಂತಿಲ್ಲ.

    ಮಂಗಳೂರಿನ ಸಿಟಿ ಸೆಂಟರ್ ನಂಥಹ ಮಾಲ್ ನಲ್ಲಿ ಇರುವ ಪ್ರತಿಯೊಂದು ಅಂಗಡಿಯೂ ವ್ಯವಹಾರವನ್ನು ನಡೆಸುತ್ತಿದ್ದು, ಇದಕ್ಕಾಗಿ ಸ್ಥಳೀಯಾಡಳಿತ ಕೆಲವು ರೀತಿಯ ರಿಯಾಯಿತಿಗಳನ್ನೂ ನೀಡಿರುತ್ತದೆ.

    ಈ ಕಾರಣಕ್ಕಾಗಿ ಮಾಲ್ ಗಳು ಯಾವುದೇ ಕಾರಣಕ್ಕೂ ಗ್ರಾಹಕರ ವಾಹನಗಳಿಗೆ ಶುಲ್ಕವನ್ನು ವಿಧಿಸುವಂತಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಹೈದರಾಬಾದ್ ಹೈಕೋರ್ಟ್ ಆದೇಶವನ್ನು ಮಂಗಳೂರಿನ ಸಿಟಿ ಸೆಂಟರ್ ಗೂ ಅನ್ವಯಿಸುವ ಪ್ರಯತ್ನ ಮಂಗಳೂರು ಮಹಾನಗರ ಪಾಲಿಕೆಯಿಂದ ಆಗಬೇಕಿದೆ.

    ಸಿಟಿ ಸೆಂಟರ್ ಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ಫೀಸ್ ವಸೂಲಿ ಮಾಡುವ ಕಾರಣ ಸೆಂಟರ್ ಗೆ ಬರುವ ಎಲ್ಲಾ ವಾಹನಗಳು ಇದೀಗ ಟಾಗೋರ್ ಪಾರ್ಕ್ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕ್ ಮಾಡಲಾಗುತ್ತಿದೆ.

    ಸಿಟಿ ಸೆಂಟರ್ ಗೆ ಬರುವ ಗ್ರಾಹಕರ ತಲೆ ನೋವನ್ನು ಇದೀಗ ಟಾಗೋರ್ ಪಾರ್ಕ್ ರಸ್ತೆ ಮೂಲಕ ಸಂಚರಿಸುವ ಪ್ರತಿಯೊಬ್ಬ ವಾಹನ ಚಾಲಕನೂ ಅನುಭವಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

    ಗ್ರಾಹಕರ ಎಲ್ಲಾ ವಾಹನಗಳು ಪಾರ್ಕಿಂಗ್ ಫೀಸ್ ತಪ್ಪಿಸುವ ಉದ್ದೇಶದಿಂದ ಸೆಂಟರ್ ನ ಅಕ್ಕಪಕ್ಕ ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಪೋಲೀಸ್ ಇಲಾಖೆ ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ಈ ಬಗ್ಗೆ ಸಿಟಿ ಸೆಂಟರ್ ಕಟ್ಟಡದ ವಾರೀಸುದಾರರಿಗೆ ಈ ವಿಚಾರಗಳನ್ನು ಮನವರಿಕೆ ಮಾಡಿಕೊಡಬೇಕಿದೆ.

    ತಮ್ಮ ತಲೆ ನೋವನ್ನು ಇತರರ ಮೇಲೆ ಹಾಕುತ್ತಿರುವ ಸಿಟಿ ಸೆಂಟರ್ ಕಟ್ಟಡದ ಮಾಲಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಪ್ರತಿ ಕಟ್ಟಡಕ್ಕೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಕಟ್ಟಡದ ಮಾಲಿಕನ ಕರ್ತವ್ಯ.

    ಕಾನೂನು ಇದನ್ನೇ ಹೇಳುತ್ತಿದ್ದರೂ, ಸಿಟಿ ಸೆಂಟರ್ ಗೆ ಮಾತ್ರ ಈ ಯಾವುದೇ ಕಾನೂನು ಅನ್ವಯಿಸುವುದಿಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಪಾರ್ಕಿಂಗ್ ಗೂ ಹಣ ವಸೂಲಿ ಮಾಡುತ್ತಿರುವ ಸಿಟಿ ಸೆಂಟರ್ ಕಟ್ಟಡದ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಸಿಟಿ ಸೆಂಟರ್ ಗೆ ವ್ಯವಹಾರ ನಡೆಸಲು ಹೋಗುವ ವಾಹನಗಳು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿರುವುದು ಕಂಡು ಬಂದರೆ ಆ ವಾಹನಗಳ ಮೇಲೆ ಕೇಸು ದಾಖಲಿಸುವ ಕೆಲಸವನ್ನು ಪೋಲೀಸರು ಮಾಡಬೇಕಿದೆ.

    ಈ ವಾಹನಗಳಿಗೆ ಕೇಸು ಬಿದ್ದಾಗ ಮಾತ್ರ ಸಿಟಿ ಸೆಂಟರ್ ಗೆ ಗ್ರಾಹಕನಾಗಿ ತೆರಳುವವರ ಸಂಖ್ಯೆ ಕಡಿಮೆಯಾಗಲಿದ್ದು, ಇದರ ನೇರ ಹೊಡೆತ ಸೆಂಟರ್ ನ ಮೇಲೆ ಬೀಳಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply