LATEST NEWS
ಗಾಂಜಾದೊಂದಿಗೆ ದುಬೈಗೆ ಹೊರಟ ವ್ಯಕ್ತಿ ಸೀದಾ ಜೈಲಿಗೆ
ಗಾಂಜಾದೊಂದಿಗೆ ದುಬೈಗೆ ಹೊರಟ ವ್ಯಕ್ತಿ ಸೀದಾ ಜೈಲಿಗೆ
ಮಂಗಳೂರು, ಅಕ್ಟೋಬರ್ 20 : ಮಂಗಳೂರು ಅಂತರಾಷ್ಟ್ರೀಯ ನಿಲ್ದಾಣ ಒಂದಲ್ಲ ಒಂದು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಒಂದಾ ಬಾಂಬ್, ಚಿನ್ನ ಅಥವಾ ವಿದೇಶಿ ಕರೆನ್ಸಿ. ಆದರೆ ಈ ಬಾರಿ ವಿಮಾನ ನಿಲ್ದಾಣ ಗಾಂಜಾ ದ ಮೂಲಕ ಸದ್ದು ಮಾಡಿದೆ. ಮಂಗಳೂರಿನಿಂದ ದುಬೈಗೆ ಗಾಂಜಾ ಸಾಗಿಸುವ ಯತ್ನ ನಡೆಸಿದ ಆರೋಪಿಯೋರ್ವನನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದುಬೈಗೆ ತೆರಳಲೆಂದು ವಿಮಾನ ನಿಲ್ದಾಣಕ್ಕೆ ಬಂದಿದ್ದ ಈತನ ಬ್ಯಾಗ್ ತಪಾಸಣೆ ನಡೆಸಿದ ಸಂದರ್ಭದಲ್ಲಿ 4 ಕೆ.ಜಿ ಗಾಂಜಾ ಕಸ್ಟಮ್ಸ್ ಅಧಿಕಾರಿಗಳಿಗೆ ಪತ್ತೆಯಾಗಿದೆ. ಬಂಧಿತ ಆರೋಪಿಯನ್ನು ಕೇರಳದ ಮಂಜೇಶ್ವರ ನಿವಾಸಿ ಅಭಿಲಾಶ್ (25) ಎಂದು ಗುರುತಿಸಲಾಗಿದ್ದು, ಈತನನ್ನು ಬಜಪೆ ಠಾಣಾ ಪೋಲೀಸರಿಗೆ ಹಸ್ತಾಂತರಿಸಲಾಗಿದೆ. ಮಂಗಳೂರಿನಿಂದ ದುಬೈಗೆ ತೆರಳುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ix 889 ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದ ಈತ ಇದೀಗ ದುಬೈ ಗೆ ಹೋಗುವ ಬದಲು ಸೀದಾ ಜೈಲಿಗೆ ಹೋಗಲು ಸಿದ್ಧವಾಗಿದ್ದಾನೆ.
You must be logged in to post a comment Login