Connect with us

FILM

ಕೊರೊನಾ ಭೀತಿಯಲ್ಲಿ ಬಾಲಿವುಡ್….ಹಾಟ್‌ಬ್ಯೂಟಿಗೆ ಹೋಂ ಕ್ವಾರಂಟೈನ್‌…!!

ನಟಿ ಮಲೈಕಾ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌!

ಮುಂಬೈ, ಜೂನ್ 11, ಮುಂಬೈನಲ್ಲಿ ಕೊರೊನಾ ಸೃಷ್ಟಿಸಿದ ಅವಾಂತರ ಈಗ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿಯಲ್ಲೂ ನಡುಕ ಹುಟ್ಟಿಸಿದೆ. ಇತ್ತೀಚೆಗಷ್ಟೇ ಮ್ಯೂಸಿಕ್ ಡೈರೆಕ್ಟರ್ ಆಗಿ ಹೆಸರು ಮಾಡಿದ್ದ ವಾಜಿದ್ ಖಾನ್ ಕೊರೊನಾಕ್ಕೆ ಬಲಿಯಾದ ಬಳಿಕ ಬೆದರಿದ ಬಾಲಿವುಡ್ ನಟನಾಮಣಿಗಳು ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್ ಆಗತೊಡಗಿದ್ದಾರೆ.


ಯಸ್, ಹೀಗೆ ಸೆಲ್ಫ್ ಕ್ವಾರಂಟೈನ್ ಆಗಿರುವುದನ್ನು ಈಗ ಖ್ಯಾತ ನಟಿ ಮಲೈಕಾ ಅರೋರಾ ಹೇಳಿಕೊಂಡಿದ್ದಾಳೆ. ಮಲೈಕಾ ವಾಸ ಮಾಡುತ್ತಿರುವ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟಿನಲ್ಲಿ ಬಾಲಕಿಯೊಬ್ಬಳಿಗೆ ಎರಡು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆದಬಳಿಕ ಇಡೀ ಫ್ಲಾಟನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ, ಆ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಇದೇ ಫ್ಲಾಟಿನಲ್ಲಿರುವ ಮಲೈಕಾ, ಲಾಕ್ ಡೌನ್ ಅವಧಿಯ ಕಳೆದ ಮೂರು ತಿಂಗಳಿನಿಂದಲೂ ಮಗು ಅರ್ಹಾನ್ ಜೊತೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾಳೆ.


ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮತ್ತು ಜಾನ್ವಿ ಕಪೂರ್ ಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರು ಕೂಡ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉರಿ ಚಿತ್ರದ ಖ್ಯಾತಿಯ ವಿಕ್ಕೀ ಕೌಶಲ್ ವಾಸವಿರುವ ಫ್ಲಾಟ್ ಕೂಡ ಸೀಲ್ ಡೌನ್ ಆಗಿದ್ದು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಕೌಶಲ್ ಫ್ಲಾಟಿನಲ್ಲೂ ಬಾಲಕಿಯೊಬ್ಬಳು ಪಾಸಿಟಿವ್ ಆದಬಳಿಕ ಇಡೀ ಬಿಲ್ಡಿಂಗ್ ಸೀಲ್ ಡೌನ್ ಆಗಿತ್ತು.


ಅಂದಹಾಗೆ, ಮಲೈಕಾ ಅರೋರಾ ಹೆಚ್ಚು ಕಾಲ ಮನೆಯಲ್ಲೇ ಇದ್ದು ಅಡುಗೆ, ಯೋಗದ ಜೊತೆಗೆ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾಳೆ. ಅಲ್ಲದೆ, ಸೋಶಿಯಲ್ ಮೀಡಿಯಾಗಳಲ್ಲಿ ಏಕ್ಟಿವ್ ಆಗಿದ್ದಾಳೆ. ಹಿಂದಿನ ಕೆಲವು ಅಪರೂಪದ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡಿ, ಫ್ಯಾನ್ಸ್ ಗಳ ಜೊತೆ ಹರಟುತ್ತಾಳೆ. ಇದೇ ಅಲ್ಲದೆ, ಮಲೈಕಾ ತನ್ನ ಸಮಕಾಲೀನರಾಗಿದ್ದ ಕರೀನಾ, ಕರಿಷ್ಮಾ ಕಪೂರ್ ಮತ್ತು ತನ್ನ ತಂಗಿ ಅಮೃತಾ ಅರೋರಾ ಜೊತೆಗೂ ನಿರಂತರ ಟಚ್ಚಲ್ಲಿದ್ದಾಳೆ. ವಿಡಿಯೋ ಚ್ಯಾಟಿಂಗ್ ಮಾಡುತ್ತಾ ತಮ್ಮ ಅಪರೂಪದ ಫೋಟೋಗಳನ್ನು ಹರಿಯಬಿಡುವುದು ಇವರ ಫ್ಯಾನ್ ಗಳಿಗೆ ರಸದೌತಣ ನೀಡಿದಂತಾಗುತ್ತಿದೆ.


ಹಳೆಯ ಪತಿ ಆಬಾಝ್ ಖಾನ್ ಜೊತೆಗಿನ ಸಂಬಂಧ ಕಡಿದುಕೊಂಡ ಬಳಿಕ ಮಲೈಕಾ ತನ್ನ ಗೆಳೆಯ ಅರ್ಜುನ್ ಕಪೂರ್ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ. ಬಹುಕಾಲ ಈ ಸಂಬಂಧವನ್ನು ಸೀಕ್ರೆಟ್ ಆಗೇ ಇಟ್ಟಿದ್ದ ಮಲೈಕಾ ಅದನ್ನೂ ಈಚೆಗೆ ರಿವೀಲ್ ಮಾಡಿದ್ದಾಳೆ. ಸದ್ಯಕ್ಕೆ ಗೆಳೆತನದ ಸಂಬಂಧ ಅಷ್ಟೇ ಇಟ್ಟುಕೊಂಡಿದ್ದೇವೆ. ಮದುವೆಯಾಗುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ್ದಾಳೆ.
ಇದೇನಿದ್ದರೂ ಕೊರೊನಾ ಭೀತಿಯಿಂದ ಬಾಲಿವುಡ್ ನಟನಾಮಣಿಗಳಲ್ಲಿ ಈಗ ನಡುಕ ಹುಟ್ಟಿದ್ದಂತೂ ಸತ್ಯ..