Connect with us

    FILM

    ಕಾರ್ ರೇಸಿಂಗ್ ಗಿಂತ ಬ್ಲೂ ಫಿಲ್ಮ್ ಬೆಸ್ಟ್ ಎಂದ ಮಹಿಳಾ ರೇಸರ್…!!

    ಸ್ಪೋರ್ಟ್ಸ್ ನಲ್ಲಿ ಸಂಪಾದನೆ ಆಗದ ಹಿನ್ನಲೆ ಬ್ಲೂ ಫಿಲ್ಮ್ ಇಂಡಸ್ಟ್ರೀಗೆ ಕಾಲಿಟ್ಟ ರೇಸರ್

    ಕ್ಯಾನ್ಬೆರಾ: ಹಣ ಮನುಷ್ಯನನ್ನು ಹೆಗೆಲ್ಲಾ ಬದಲಾಯಿಸುತ್ತೆ ಅನ್ನೊದಕ್ಕೆ ಈ ಸ್ಟೋರಿ ಒಳ್ಳೆಯ ಉದಾಹರಣೆ. ಆಸ್ಟ್ರೇಲಿಯಾದ ಮೊಟ್ಟ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ರೇಸರ್ ಎಂದು ಗುರುತಿಸಿಕೊಂಡಿದ್ದ ರೇನಿ ಗ್ರೇಸಿ ಮೋಟಾರ್ ಸ್ಪೋರ್ಟ್ ತೊರೆದು ಈಗ ಬ್ಲೂ ಫಿಲ್ಮ್ ಚಿತ್ರ ತಾರೆಯಾಗಿ ಬದಲಾಗಿದ್ದಾರೆ.

    ಗ್ರೇಸಿ ಆಸ್ಟ್ರೇಲಿಯಾದ ಪ್ರಸಿದ್ಧ 1000 ಸೂಪರ್ ಕಾರ್ ರೇಸ್‍ನಲ್ಲಿ ಭಾಗವಹಿಸಲು 2015ರಲ್ಲಿ ಸಿಮೋನಾ ಡಿ ಸಿಲ್ವೆಸ್ಟ್ರೊ ಜೊತೆಗೂಡಿದ್ದರು. 1998ರಿಂದ ಬಹುತೇಕ ರೇಸ್‍ಗಳಲ್ಲಿ ಗ್ರೇಸಿ ಹಾಗೂ ಸಿಮೋನಾ ಜೊತೆಯಾಗಿಯೇ ರೇಸ್‍ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಉತ್ತಮ ಮಹಿಳಾ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಗ್ರೇಸಿ ರೇಸಿಂಗ್‍ನಲ್ಲೇ ಭವಿಷ್ಯ ರೂಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಆಕೆಗೆ ಹೆಚ್ಚು ಅವಕಾಶಗಳು ದೊರೆಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಡಲ್ಟ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

    ಆದರೆ ರೇಸಿಂಗ್ ನಲ್ಲಿ ತನ್ನ ಭವಿಷ್ಠ ರೂಪಿಸಿಕೊಳ್ಳಬೇಕು ಎಂಬ ಮಹದಾಸೆಗೆ ಹಣದ ಸಮಸ್ಯೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು. ಆರಂಭಗಲ್ಲಿ ರೇಸಿಂಗ್ ನಲ್ಲಿ ಗ್ರೇಸಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರೇನೀ ಗ್ರೇಸಿ ರೇಸಿಂಗ್ ಬಿಟ್ಟು ಸ್ಥಳೀಯ ಕಾರ್ ಯಾರ್ಡ್‍ನಲ್ಲಿ ಕೆಲಸ ಮಾಡ ತೊಡಗಿದರು. ಇದರಿಂದಲೂ ಗ್ರೇಸಿಗೆ ಹೇಳಿಕೊಳ್ಳುವಂತಹ ಆದಾಯ ಬರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರೇನೀ ಗ್ರೇಸಿ ನೀಲಿ ಚಿತ್ರಗಳ ವೆಬ್ ಸೈಟ್ ತೆರೆದು ತಮ್ಮದೇ ವಿಡಿಯೋ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

    ನಂತರ ಗ್ರೇಸಿ ಅಡಲ್ಟ್ ಸ್ಟಾರ್ ಆಗಿ ಪರಿವರ್ತನೆಯಾಗಿ ಮೊದಲ ವಾರದಲ್ಲೇ ಸುಮಾರು 2.26 ಲಕ್ಷ ರೂ.(3,000 ಡಾಲರ್)ಸಂಪಾದಿಸಿದ್ದಾಳೆ. ಪ್ರಸ್ತುತ ಆಕೆಯ ಅಡಲ್ಟ್ ವೆಬ್‍ಸೈಟ್‍ಗೆ ಸುಮಾರು 7 ಸಾವಿರ ಜನ ಚಂದಾದಾರರಿದ್ದಾರೆ.

    ಈ ಕುರಿತು ತನ್ನ ಮನದಾಳದ ಮಾತು ಹಂಚಿಕೊಂಡಿರುವ ಗ್ರೇಸಿ, ಈಗಿರುವ ಹಣಕಾಸಿನ ಉತ್ತಮ ಪರಿಸ್ಥಿತಿಯನ್ನು ನಾನು ಜೀವನದಲ್ಲಿ ಹಿಂದೆಂದೂ ಕಂಡಿಲ್ಲ. ನನ್ನ ಜೀವನದಲ್ಲಿ ಇದನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಅಡಲ್ಟ್ ಮಾಡೆಲ್ ಆಗಿ ಪ್ರಸ್ತುತ ವಾರಕ್ಕೆ ಸುಮಾರು 1.88 ಲಕ್ಷ ರೂ.(2,500 ಡಾಲರ್)ಗಳನ್ನು ಸಂಪಾದಿಸುತ್ತಿದ್ದೇನೆ ಎಂದಿದ್ದಾಳೆ.

    ನನ್ನ ಜೀವನದಲ್ಲಿ ಮಾಡಿದ ಅದ್ಭುತ ಕೆಲಸವಿದು. ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ಈ ಕೆಲಸದಿಂದ ಸಂಪಾದಿಸುತ್ತಿದ್ದೇನೆ, ನಿಜವಾಗಿಯೂ ಈ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಯಾರು ಏನೇ ಹೇಳಿದರೂ ನನಗೆ ಅಭ್ಯಂತರವಿಲ್ಲ. ಏಕೆಂದರೆ ನಾನು ಚೆನ್ನಾಗಿದ್ದೇನೆ. ಹೆಚ್ಚು ಹಣ ಸಂಪಾದಿಸುತ್ತಿದ್ದೇನೆ. ಈಗಿರುವ ಸ್ಥಾನದಲ್ಲಿ ನಾನು ಸುಭದ್ರವಾಗಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ.

    ಸೂಪರ್‍ಕಾರ್ ಡ್ರೈವರ್ ಆಗಿದ್ದಾಗ ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ. ಸಾಕಷ್ಟು ಹಣ ಗಳಿಸಲು ಸಹ ಸಾಧ್ಯವಾಗಲಿಲ್ಲ. ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ. ಆದರೆ ನನ್ನ ಕನಸುಗಳೇ ಕೊಚ್ಚಿ ಹೋಗುವ ಹಂತ ತಲುಪಿತು. ಹೀಗಾಗಿ ಈ ಉದ್ಯೋಗ ಪ್ರಾರಂಭಿಸಿದೆ ಎಂದು ತಮ್ಮ ಜೀವನದಲ್ಲಿ ಎದುರಿಸಿದ ಕಠಿಣ ಪರಿಸ್ಥಿತಿ ಕುರಿತು ವಿವರಿಸಿದ್ದಾಳೆ.

     

    Share Information
    Advertisement
    Click to comment

    You must be logged in to post a comment Login

    Leave a Reply