Connect with us

    FILM

    ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

    ಮುಂಬೈ, ಜೂನ್ 14 : ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ (34) ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಬೆಳಗ್ಗೆ ಮನೆ ತೆರಯದಿರುವಾಗ ಬಾಗಿಲು ಒಡೆದು ನೋಡಿದಾಗ ಸುಶಾಂತ್ ಆತ್ಮಹತ್ಯೆ ಮಾಡಿದ್ದು ಕಂಡುಬಂತು ಎಂದು ಪೊಲೀಸರು ತಿಳಿಸಿದ್ದಾರೆ.

    ಕೈ ಪೊ ಚೆ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದ ಸುಶಾಂತ್, ಎಂ.ಎಸ್.ಧೋನಿ ಜೀವನಾಧರಿತ ಚಿತ್ರದಲ್ಲಿ ಹೆಸರು ಮಾಡಿದ್ದರು. ಸುಶಾಂತ್, ಕಳೆದ ಆರು ತಿಂಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಕೈ ಪೊ ಚೆ ಚಿತ್ರದಲ್ಲಿ ಹೆಸರು ಮಾಡಿದ್ದ ಸುಶಾಂತ್ ಮೂಲತಃ ಸೀರಿಯಲ್ ಏಕ್ಟರ್ ಆಗಿದ್ದರು.‌ ಪವಿತ್ರ ರಿಶ್ತಾ , ಕಿಸ್ ದೇಶ್ ಮೇ ಮೇರಾ ದಿಲ್ ಸೀರಿಯಲ್ ನಲ್ಲಿ ಹೆಸರು ಗಳಿಸಿದ್ದ ಸುಶಾಂತ್, ಅಬಳಿಕ ಬಾಲಿವುಡ್ ಪ್ರವೇಶ ಮಾಡಿದ್ದರು.

    ಎಂ.ಎಸ್ ಧೋನಿ – ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಧೋನಿ ಪಾತ್ರಧಾರಿಯಾಗಿ ಸುಶಾಂತ್ ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು.

    ನಟ ಸುಶಾಂತ್ ಜೊತೆ ಈ ಹಿಂದೆ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಜೂನ್ 8ರಂದು ಮಲಾಡ್ ನಲ್ಲಿರುವ ತನ್ನ ಫ್ಲಾಟ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದಿಶಾ ಆತ್ಮಹತ್ಯೆಗೂ ಸುಶಾಂತ್ ಸಾವಿಗೂ ಏನಾದ್ರೂ ಹೋಲಿಕೆ ಇದೆಯಾ ಅನ್ನೋದು ತಿಳಿದುಬಂದಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply