Connect with us

DAKSHINA KANNADA

ಸ್ವಾತಂತ್ರ್ಯೋತ್ಸವದಲ್ಲಿ ಧ್ವಜವಂದನೆಗೈದ ಕಟೀಲು ದೇವಾಲಯದ ಮಹಾಲಕ್ಷ್ಮಿ ಆನೆ

Share Information

ಕಟೀಲು, ಆಗಸ್ಟ್ 15: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳಿಂದ ದೇವಳದ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ನಿವೃತ್ತ ಸೈನಿಕರಾದ ಲಕ್ಷ್ಮೀನಾರಾಯಣ ರಾವ್ ಧ್ವಜಾರೋಹಣಗೈದರು. ನಿವೃತ್ತ ಸೈನಿಕರಾದ ನವಾನಂದ ಎಕ್ಕಾರು ದಿಕ್ಸೂಚಿ ಮಾತುಗಳನ್ನಾಡಿದರು. ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು, ಅರ್ಚಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಇನ್ನು ಈ ಹಿಂದೆ ಪುಟ್ ಬಾಲ್ ಆಡಿ, ಕ್ರಿಕೇಟ್ ಆಡಿ, ತಾನೇ ನೀರಿನ ಪೈಪ್ ಹಿಡಿದು ಸ್ಥಾನ ಮಾಡಿದ ದೇವಳದ ಆನೆ ಮಹಾಲಕ್ಷೀ ರಾಷ್ಟ್ರ ಧ್ವಜವನ್ನು ಹಿಡಿದು ಭಾಗವಹಿಸಿದ್ದು ಮಾತ್ರವಲ್ಲದೆ, ಧ್ವಜ ವಂದನೆ ಗೈದಿರುದು ವಿಶೇಷವಾಗಿತ್ತು.

ಕಟೀಲು ದೇವರಿಗೂ ಕೇಸರಿ ಬಿಳಿ ಹಸುರು, ಬಣ್ಣದ ಹೂವುಗಳಿಂದ ವಿಶೇಷ ವಾಗಿ ಅಲಂಕಾರ ಮಾಡಲಾಗಿದ್ದು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಗಮನ ಸೆಳೆಯಿತು.


Share Information
Advertisement
Click to comment

You must be logged in to post a comment Login

Leave a Reply