Connect with us

    FILM

    ಕೊನೆಗೂ ಭಾರತೀಯ ಪೌರತ್ವ ಪಡೆದ ಅಕ್ಷಯ್ ಕುಮಾರ್

    ಮುಂಬೈ ಅಗಸ್ಟ್ 15: ಕೆನಡಾ ಪೌರತ್ವ ಹೊಂದಿದ್ದ ಹಿನ್ನಲೆ ಭಾರೀ ಟೀಕೆಗಳನ್ನು ಎದುರಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೊನೆಗೂ ಭಾರತೀಯ ಪೌರತ್ವ ಪಡೆದಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ನಟ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


    ಇಲ್ಲಿಯವರೆಗೂ ಅಕ್ಷಯ್‌ ಕುಮಾರ್‌ಗೆ ಕೆನಡಾದ ಪೌರತ್ವ ಇತ್ತು. ಈ ವಿಚಾರವಾಗಿ ಸಾಕಷ್ಟು ಟೀಕೆಗಳನ್ನ ನಟ ಎದುರಿಸಿದ್ದರು. ಅವರ ಸಿನೆಮಾಗಳ ಬಿಡುಗಡೆ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿಅವರ ಪೌರತ್ವದ ಕುರಿತು ಟೀಕೆಗಳು ಎದುರಾಗುತ್ತಿದ್ದವು. ಇದೀಗ ನಟ ಅಕ್ಷಯ್ ಕುಮಾರ್ ಇದೀಗ ಭಾರತೀಯ ನಾಗರಿಕ ಎಂದೆನಿಸಿಕೊಂಡಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯಂದು ಅವರಿಗೆ ಸಿಹಿಸುದ್ದಿ ಸಿಕ್ಕಿದೆ. ಅಫಿಷಿಯಲ್ ಆಗಿ ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಹೃದಯ ಮತ್ತು ಪೌರತ್ವ ಎರಡು ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್ ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೊನೆಗೂ ಭಾರತೀಯ ಪೌರತ್ವವನ್ನ ಅಕ್ಷಯ್ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply