Connect with us

    KARNATAKA

    ಕೊಡಗು ಪೊಲೀಸರ ನೆಚ್ಚಿನ ಶ್ವಾನ ಧೀರ ‘ಲಿಯೊ’ ಇನ್ನಿಲ್ಲ..!

    ಮಡಿಕೇರಿ : ಕೊಡಗು ಪೊಲೀಸರ ನೆಚ್ಚಿನ ಶ್ವಾನ ‘ಲಿಯೋ’ ನಿಧನ ಹೊಂದಿದೆ. ಶ್ವಾನ ದಳದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಲಿಯೊ ಅನಾರೋಗ್ಯ ದಿಂದ ಗುರುವಾರ ಕೊನೆಯುಸಿರು ಎಳೆದಿದೆ.


    ಶ್ವಾನದಳ ಸಿಬ್ಬಂದಿ ಮನಮೋಹನ್ ಗರಡಿಯಲ್ಲಿ ಪಳಗಿದ್ದ ಲಿಯೊ 380 ಕ್ಕೂ ಅಧಿಕ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ನಾಡನ್ನೇ ತಲ್ಲಣಗೊಳಿಸಿದ್ದ ಭೂ ಕುಸಿತ ಸಂದರ್ಭ ನಾಲ್ಕು ಮೃತ ದೇಹ ಪತ್ತೆಹಚ್ಚುವ ಕಾರ್ಯವನ್ನು ಈ ಲಿಯೋ ಮಾಡಿತ್ತು ಇನ್ನು ಲಿಯೊ ಕರ್ತವ್ಯ ಪರತೆಗೆ ಐದು ಪದಕ ದೊರೆತಿದೆ. ಲಿಯೋ ನಿಧನಕ್ಕೆ ಕೊಡಗು ಪೊಲೀಸ್ ಸಿಬ್ಬಂದಿಗಳು ಕಂಬನಿ ಮಿಡಿದಿದ್ದು, ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

    Share Information
    Advertisement
    Click to comment

    You must be logged in to post a comment Login

    Leave a Reply