Connect with us

    BANTWAL

    ಬಂಟ್ವಾಳ; ಮೇಯಲು ಬಿಟ್ಟಿದ್ದ ಮೂರು ಕೋಣಗಳು ಕಾಣೆ, ಒಂದು ಮೃತ್ಯು- ಪ್ರಕರಣ ಸುಖಾಂತ್ಯ..!

    ಬಂಟ್ವಾಳ : ಬಂಟ್ವಾಳದಲ್ಲಿ  ಕಾಣೆಯಾಗಿದ್ದ ಮೂರು ಕೋಣಗಳ ಪೈಕಿ ಎರಡು ಕೋಣಗಳು ಜೀವಂತವಾಗಿ ಪತ್ತೆಯಾದರೆ ಇನ್ನೊಂದು ಕೋಣ ಶವವಾಗಿ ಪತ್ತೆಯಾಗಿದೆ. ಈ ಮೂಲಕ ಕಳವು ಪ್ರಕರಣ ಎಂದು ದೂರು ದಾಖಲಾಗಿ ತನಿಖೆ ಪ್ರಗತಿಯಲ್ಲಿರುವಾಗಲೇ ಪ್ರಕರಣ ಸುಖಾಂತ್ಯ ಗೊಂಡಿದೆ.

    ಕೋಣಗಳ ಮಾಲಿಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೋಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ಕೋಣಗಳು ಪತ್ತೆಯಾಗಿದೆ. ಅಮ್ಮುಂಜೆ ದೇವಂದಬೆಟ್ಟು ನಿವಾಸಿ ವಿನಯ ಬಲ್ಯಾಯ ಎಂಬವರ ಮನೆಯ ಸಮೀಪದ ಗದ್ದೆಯಿಂದ ಡಿ.17 ರಂದು ಮೇಯಲು ಕಟ್ಟಿ ಹಾಕಿದ್ದ ಮೂರು ಕೋಣಗಳು ನಾಪತ್ತೆಯಾಗಿತ್ತು. ಕೂಡಲೇ ಮನೆಯವರು ಸಮೀಪದಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ ಕಾರಣ ಮೂರು ಕೋಣಗಳು ಕಳವಾಗಿದೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಸಂಬಂಧ ಸ್ಥಳೀಯ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಈ ಮಧ್ಯೆ ಸ್ಥಳೀಯರು ಗುಡ್ಡದಲ್ಲಿ ಕೋಣಗಳು ಇರುವುದನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ‌. ಮೂರು ಕೋಣಗಳ ಪೈಕಿ ಎರಡು ಕೋಣಗಳು ಸ್ವಲ್ಪ ದೂರದ ಗುಡ್ಡವೊಂದರಲ್ಲಿ ಮೇಯುತ್ತಿದ್ದರೆ, ಇನ್ನೊಂದು ಕೋಣ ಮಾತ್ರ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಹೂತು ಮೇಲೆ ಬರಲಾಗದೆ ಮೃತಪಟ್ಟಿತ್ತು.ಕೋಣಗಳನ್ನು ಮನೆಯವರಿಗೆ ಪೊಲೀಸರು ಹಸ್ತಾಂತರ ಮಾಡಿದರೆ,  ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿಯನ್ನು ಬಿಟ್ಟು ಕಳುಹಿಸಲಾಯಿತು. ಈ ಮೂಲಕ ಗೊಂದಲ ಉಂಟುಮಾಡಿದ್ದ ಕೋಣಗಳ ಕಳವು ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.
    .

    Share Information
    Advertisement
    Click to comment

    You must be logged in to post a comment Login

    Leave a Reply