Connect with us

  BANTWAL

  ಲೋಕಸಮರ@24 : ದಕ್ಷಿಣ ಕನ್ನಡದಲ್ಲಿ ಕಮಲ ಪಾಳಯದ ನಿದ್ದೆ ಕೆಡಿಸಿದ ಎಸ್‌ಡಿಪಿಐ..!

  ಪುತ್ತೂರು : ಭಾರಿ ನಿರೀಕ್ಷೆಯ ಲೋಕಸಭಾ ಚುನಾವಣೆ ದಕ್ಷಿಣ ಕನ್ನಡದಲ್ಲಿ ದಿನದಿಂದ ರಂಗು ಪಡೆಯುತ್ತಿದೆ. ಕೇಸರಿ ಪಡೆ ವಿರುದ್ಧ ಉಳಿದ ಪಕ್ಷಗಳು ಒಟ್ಟಾಗಿದ್ದು ಹಿಂದುತ್ವ ಪ್ರತಿಪಾದಕ ಪಕ್ಷ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತಿದ್ದು ಕಮಲ ಪಾಳಯಕ್ಕೆ ಸಹಜವಾಗಿಯೇ ತಲೆ ನೋವು ತಂದಿದೆ.

  ಬಿಜೆಪಿಯಿಂದ ಮಾಜಿ ಸೇನಾಧಿಕಾರಿ ಬ್ರಿಜೇಶ್ ಚೌಟ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ  ಯುವ ನ್ಯಾಯವಾದಿ ಪದ್ಮರಾಜ್ ಕಣದಲ್ಲಿದ್ದಾರೆ.  ಜಿಲ್ಲೆಯಲ್ಲಿ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸತತತವಾಗಿ ಸ್ಪರ್ಧಿಸುತ್ತಿದ್ದ ಪ್ರಮುಖ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದೆ ಕಾಂಗ್ರೇಸ್ ಪರ ನಡಿಗೆ ಆರಂಭಿಸಿವೆ. ಎಡಪಂಥೀಯ ಪಕ್ಷಗಳಾದ ಸಿಪಿಐ, ಸಿಪಿಎಂ ಕೂಡ ಕಾಂಗ್ರೆಸನ್ನು ಬೆಂಬಲಿಸಿದೆ.   2014 ಮತ್ತು 2019 ರ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎಸ್‌ಡಿಪಿಐ ಮುಸ್ಲಿಂ ಮತಗಳ ಕೇಂದ್ರೀಕರಣಕ್ಕೆ ಪ್ಲಾನ್ ಮಾಡಿದ್ದು ಕಾಂಗ್ರೇಸ್ ನ ಕಟ್ಟರ್ ವಿರೋಧಿಯಾಗಿದ್ದರೂ ತನ್ನ ಅಭ್ಯರ್ಥಿ ಕಣಕ್ಕಿಳಿಸದಿರಲು ನಿರ್ಧಾರಿಸಿದೆ. 2014 ರಲ್ಲಿ ಎಸ್‌ಡಿಪಿಐ ಹನೀಫ್ ಖಾನ್ ಸ್ಪರ್ಧಿಸಿ 27,254 ಮತ ಪಡೆದಿದ್ದರು, 2019 ರಲ್ಲಿ ಮಹಮ್ಮದ್ ಇಲ್ಯಾಸ್ ಸ್ಪರ್ಧಿಸಿ 46,839 ಮತ ಪಡೆದಿದ್ದರು. ಈ ಮೂಲಕ ಮುಸ್ಲಿಂ ಮತಗಳ ಕೇಂದ್ರೀಕರಿಸಲು ನಿರ್ಧಾರಿಸಿದೆ. ಎಸ್.ಡಿ.ಪಿ.ಐ ನಡೆಗೆ ಬಿಜೆಪಿ ಸಹಜವಾಗಿ ಆತಂಕಗೊಂಡಿದ್ದು ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಒಳ ಒಪ್ಪಂದ ಮಾಡಿದೆ ಎಂದು ಆರೋಪಿಸಿದೆ. ಈ ಹಿಂದೆ ಕಾಂಗ್ರೇಸ್ ಎಸ್.ಡಿ.ಪಿ.ಐ ಯನ್ನು ಬಿಜೆಪಿಯ ಬಿ ಟೀಮ್ ಎನ್ನುತ್ತಿತ್ತು ಆದರೆ ಆದರೆ ಈ ಬಾರಿ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದ್ದು ದೇಶದ್ರೋಹ ಮತ್ತು ಸಮಾಜದಲ್ಲಿ ಭಯ ಉತ್ಪಾದನೆ ಮಾಡಿದ ಸಂಘಟನೆಯೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಪ್ರವೀಣ್ ನೆಟ್ಟಾರು, ಶರತ್ ಮಡಿವಾಳ್, ದೀಪಕ್ ರಾವ್, ರುದ್ರೇಶ್, ಕುಟ್ಟಪ್ಪ ಹತ್ಯೆಯ ಹಿಂದೆ ಹಿಂದೂ ವಿರೋಧಿ ನಿಲುವು ಹೊಂದಿರುವ ಇದೇ ಸಂಘಟನೆಯ ಕೈವಾಡವಿತ್ತು. ಮುಂದಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಂತಿ,ಸಮಾರಸ್ಯ, ಪ್ರೀತಿ-ವಿಶ್ವಾಸದ ವಾತಾವರಣ ಬೇಕಾಗಿದೆ ಎಂದು ಪುತ್ತಿಲ ಅವರು ಅಭಿಪ್ರಾಯಪಟ್ಟಿದ್ದು. ಈ ಭಾರಿ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಲಯನ್ಸ್‌ ಪಕ್ಷದ ಮಧ್ಯೆ ನೇರಾ ಜಿದ್ದಾಜಿದ್ದಿನ ಫೈಟ್ ಇರುವುದು ಮಾತ್ರ ಅಷ್ಟೇ ಸತ್ಯ.

   

   

  Share Information
  Advertisement
  Click to comment

  You must be logged in to post a comment Login

  Leave a Reply