Connect with us

    FILM

    ರೂಪೇಶ್ ಶೆಟ್ಟಿ​-ಸಾನ್ಯಾ ಐಯ್ಯರ್​ ಮಿತಿಮೀರಿ ರೊಮ್ಯಾನ್ಸ್ ಗೆ ಕಿಚ್ಚ ಸುದೀಪ್ ಕ್ಲಾಸ್

    ಬೆಂಗಳೂರು ಅಕ್ಟೋಬರ್ 15: ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ನಡುವಿನ ಗೆಳೆತನದ ಆಪ್ತತೆ ಹೆಚ್ಚುತ್ತಿದ್ದು, ಇದೀಗ ಈ ಆಪ್ತತೆ ಹಂತ ಮೀರಿದ ಹಿನ್ನಲೆ ಕಿಚ್ಚ ಸುದೀಪ್ ರೂಪೇಶ್ ಶೆಟ್ಟಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.


    ‘ಬಿಗ್ ಬಾಸ್ ಒಟಿಟಿ’ಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ಈ ಕಾರಣಕ್ಕೂ ಇಬ್ಬರೂ ಒಟಿಟಿ ಸೀಸನ್​ನಲ್ಲಿ ಮಿಂಚಿದ್ದಾರೆ. ಈಗ ಟಿವಿ ಸೀಸನ್​ಗೆ ಇಬ್ಬರೂ ಎಂಟ್ರಿ ಕೊಟ್ಟಾಗಿದೆ. ಇವರು ಮನೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿರುವುದು ಕಂಡು ಬಂದಿದೆ.


    ಇಬ್ಬರೂ ಹೆಚ್ಚಾಗಿ ಜೊತೆಯಲ್ಲಿ ಸುತ್ತಾಡಿಕೊಂಡು ಹಾಯಾಗಿದ್ದಾರೆ. ರಾತ್ರಿ ಲೈಟ್ ಆಫ್​ ಆದ ನಂತರವೂ ಇವರು ಹಗ್ ಮಾಡಿಕೊಂಡು ಮಾತನಾಡಿಕೊಂಡಿರುತ್ತಾರೆ. ಈಗ ಈ ಜೋಡಿಯ ರೊಮ್ಯಾನ್ಸ್ ಮಿತಿ ಮೀರಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಗಟ್ಟಿಯಾಗೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸುದೀಪ್ ಆಡಿದ ಮಾತಿಗೆ ಗಳಗಳನೆ ಅತ್ತಿದ್ದಾರೆ ರೂಪೇಶ್.


    ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್​ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್​ನಿಕ್ ಸ್ಪಾಟ್​ ಅಲ್ಲ’ ಎಂದರು ಸುದೀಪ್. ಇದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ‘ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.


    ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ’ ಎಂದು ಸುದೀಪ್ ಎಚ್ಚರಿಕೆ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply