Connect with us

    FILM

    ಬಳಕುವ ಬಳ್ಳಿಯಂತಾದ ರಣಧೀರನ ಸುಂದರಿ ಖುಷ್ಬೂ

    ಚೆನ್ನೈ: 50ರ ಹರೆಯದಲ್ಲೂ ಬಳಕುವ ಬಳ್ಳಿಯಂತೆ ಸುಂದರಿಯಾಗಿರುವ ನಟಿ ಖುಷ್ಬೂ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಸುಮಾರು 4 ದಶಕಗಳಿಂದ ಚಿತ್ರರಂಗದಲ್ಲಿರುವ ಹಿರಿಯ ನಟಿ ಖುಷ್ಬೂ ಲಾಕ್ ಡೌನ್ ಸಮಯದಲ್ಲಿ ತಮ್ಮ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.


    ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರು ರಣಧೀರ’ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು, ಕನ್ನಡದಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂತರ ಮದುವೆ, ಮಕ್ಕಳು, ರಾಜಕೀಯ ಅಂತ ಫಿಟ್‌ನೆಸ್ ಕಡೆಗೆ ಅಷ್ಟೇನೂ ಪ್ರಾಮುಖ್ಯತೆ ನೀಡಿರಲಿಲ್ಲ ಈ ಗ್ಲಾಮರಸ್ ನಟಿ. ಇದೀಗ ತಮ್ಮ ಫಿಟ್‌ನೆಸ್‌ ಬಗ್ಗೆ ಕೇರ್ ತೆಗೆದುಕೊಂಡಿರುವ ಖುಷ್ಬೂ, 50ರ ಹರೆಯದಲ್ಲೂ ಸಪೂರ ಸುಂದರಿಯಾಗಿದ್ದಾರೆ.


    ಈಚೆಗೆ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿರುವ ಅವರು, ಎಲ್ಲರನ್ನೂ ಅಚ್ಚರಿಗೆ ನೂಕಿದ್ದಾರೆ. ಅಷ್ಟಕ್ಕೂ ಖುಷ್ಬೂ ತೂಕ ಕಳೆದುಕೊಳ್ಳಲು ಲಾಕ್‌ಡೌನ್ ಕಾರಣವಂತೆ. ಹೌದು, ಲಾಕ್‌ಡೌನ್‌ ಸಮಯದಲ್ಲಿ 70 ದಿನಗಳ ಕಾಲ ಮನೆಯ ಎಲ್ಲ ಕೆಲಸವನ್ನು ತಾವೇ ಮಾಡಿದ್ದ ಖುಷ್ಬೂ ಸಹಜವಾಗಿ ತೂಕ ಕಳೆದುಕೊಂಡಿದ್ದರು.

    ಅಷ್ಟೇ ಅಲ್ಲದೆ ಖುಷ್ಬೂ ಯೋಗ ಕೂಡ ಮಾಡಿದ್ದರು. ಊಟ-ತಿಂಡಿ ಇಷ್ಟಪಡುತ್ತಿದ್ದ ಖುಷ್ಬೂ ಸ್ವಲ್ಪ ಸ್ವಲ್ಪವೇ ಆಹಾರ ಸೇವನೆಗೆ ಕಡಿವಾಣ ಹಾಕುತ್ತ ಬಂದಿದ್ದರು. ಕೆಲ ದಿನಗಳ ಹಿಂದೆ ಸೆಲ್ಫಿ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *