Connect with us

    LATEST NEWS

    ದಿನಕ್ಕೊಂದು ಕಥೆ- ದುಡಿಮೆ

    ದುಡಿಮೆ

    ಕೊಳಚೆ ನೀರಿನ ದಾರಿ ಮನೆಯನ್ನು ತೋರಿಸುವ ಊರದು .ಮಧ್ಯಪ್ರದೇಶದ ಗ್ವಾಲಿಯರ್ ನ ಕೆಳಗೇರಿ. ಅಲ್ಲಿ ಬದುಕುತ್ತಿರುವ ಕುಟುಂಬಗಳಲ್ಲಿ ಒಂದಿಬ್ಬರಾದರೂ ಊರು ಬಿಟ್ಟು ಬೇರೆ ಊರುಗಳಲ್ಲಿ ದುಡಿಯುವವರು. ಅಲ್ಲಿಂದಲೇ ಹೊರಟವರು ರಾಜು ಮತ್ತು ಅನಂತ.

    ಮದುವೆಯಾಗುವ ಮೊದಲು ಹೇಗೋ ಸಾಗಿತ್ತು ಬದುಕು. ಆದರೆ ಮಡದಿ ಬಂದ ಮೇಲೆ ಭವಿಷ್ಯದ ಕನಸು ಕಂಡವರು ಊರು ಬಿಟ್ಟರು. ರೈಲು ಮಂಗಳೂರಿಗೆ ತಲುಪಿತು. ದಿಕ್ಕಿಲ್ಲದ ಪಯಣ. ಇವರದೇ ಊರಿನ ಯಾರೋ ಇದ್ದಾರೆ ಎಂಬ ಮಾಹಿತಿಗೆ ನಾಲ್ಕುದಿನ ಅವರ ಹುಡುಕಾಟದಲ್ಲಿ ಕೈಯಲ್ಲಿ ದುಡ್ಡು ಖಾಲಿಯಾಯಿತು.

    ಅವರು ಸಿಕ್ಕಿದಾಗ ಅವರೊಂದಿಗೆ ಗಾರೆ ಕೆಲಸವನ್ನು ಆರಂಬಿಸಿದರು. ದುಡ್ಡು ಇವರ ಬಳಿಗೆ ತಲುಪುವಾಗ ಚಿಲ್ಲರೆಯಾಗುತ್ತಿತ್ತು. ಇದರಿಂದ ಜೀವನ ಸಾಗಲ್ಲ ಎಂಬ ಸತ್ಯ ತಿಳಿದು ,. ಇಬ್ಬರೂ ಜೊತೆಯಾಗಿ ಕೆಲಸ ಹುಡುಕೋಕೆ ಶುರುಮಾಡಿದಾಗ ಕೈಹಿಡಿದದ್ದು ಟೈಲ್ಸ್ ಕೆಲಸ. ಅಲ್ಲಿಂದ ಬದುಕು ಬದಲಾಯಿತು.

    ಹಸಿವು ಹೆಚ್ಚಾಗಿತ್ತು. ಬ್ಯಾಗು ಏರಿ ಹೊರಟವರು ಊರೂರು ಅಲೆದು ಕೆಲಸ ಮಾಡಿದರು. ವರ್ಷಕ್ಕೊಮ್ಮೆ ಮನೆಗೆ ತೆರಳಿ ಮುಖ ನೋಡಿ ಮತ್ತೆ ಕೆಲಸದ ಕಡೆಗೆ ಪಯಣ. ಕೊಳಚೆಯಿಂದ ಶುದ್ಧ ನೀರಿಗೆ ಮರಳಬೇಕು, ಮಗನನ್ನು ಶಾಲೆಗೆ ಸೇರಿಸಬೇಕು, ಮನೆಯೊಂದನ್ನ ಕಟ್ಟಬೇಕು, ಕೈಹಿಡಿದ ಅವಳನ್ನು ಜೊತೆಯಾಗಿ ನಡೆಸಬೇಕು. “ಎಷ್ಟು ದಿನ ಈ ಪಯಣ” ಅಂದದಕ್ಕೆ, “ಗೊತ್ತಿಲ್ಲ ಸರ್ ಹಸಿವು ಇರುವವರೆಗೂ, ಒಂದಷ್ಟು ಆಸೆಗಳಿವೆ .ಅದನ್ನು ತೀರಿಸಿ ನಾವು ನಮ್ಮೂರಿಗೆ ಹೊರಡುತ್ತೇವೆ.

    ಅಲ್ಲೇ ಇದ್ದು ದುಡಿತೇವೇ”. ಸುಸ್ತಾಗುವುದಿಲ್ಲ ,ನೋವು ಸಂತಸ ಯಾವುದೂ ಕೂಡ. ಏಕೆಂದರೆ ಬದುಕಿನ ಹಸಿವೆ ಇದೆಯಲ್ಲ. ಅದರ ಮುಂದೆ ಏನು ಇರುವುದಿಲ್ಲ. ಇಲ್ಲಿ ದುಡಿಮೆ ನಿಂತಿಲ್ಲ .ಅಲ್ಲಿ ಕೊಳಚೆಯ ಹರಿಯೋದು ಬಿಡುತ್ತಿಲ್ಲ. ಗುಡಿಸಲೊಳಗೆ ಇಲ್ಲಿ ಕೆಲಸದೊಳಗೆ ಕನಸುಗಳು ದುಡಿಯುತ್ತಿವೆ.

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply