Connect with us

FILM

ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಗೆ ರಾಯಭಾರಿಯಾಗಿ ನಟಿ ತಮನ್ನಾ

ಬೆಂಗಳೂರು ಮೇ 22: ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ನೇಮಕಗೊಂಡಿದ್ದಾರೆ. ತಮನ್ನಾಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ವೈರಲ್ ಆಗಿದೆ.


ಕರ್ನಾಟಕದ ಸರ್ಕಾರದ ಒಡೆತನದಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್​ಗೆ ಹೊಸ ರಾಯಭಾರಿ ನೇಮಕ ಆಗಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ಬ್ರ್ಯಾಂಡ್​ಗೆ ಪ್ರಚಾರ ರಾಯಭಾರಿ ಆಗಿರೋದು ವಿಶೇಷ. ಇದಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ತಮನ್ನಾ ಬದಲು ಕನ್ನಡದವರನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಸಂಭಾವನೆ ವಿಚಾರವೂ ಅನೇಕ ಹುಬ್ಬೇರುವಂತೆ ಮಾಡಿದೆ.


ಈಗಾಗಲೇ ಅನೇಕ ಬ್ಯೂಟಿ ಬ್ರ್ಯಾಂಡ್​ಗಳು ತಮನ್ನಾ ಭಾಟಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ. ಈಗ ಮೈಸೂರು ಸ್ಯಾಂಡಲ್​ಸೋಪ್ ಕೂಡ ಈ ನಟಿಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ವರ್ಷಗಳ ಕಾಲ ತಮನ್ನಾ ಜೊತೆ ಕರ್ನಾಟ ಸರ್ಕಾರ ಒಪ್ಪಂದ ಇರಲಿದೆ. ಇದಕ್ಕಾಗಿ ನಟಿಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ವೈರಲ್ ಆಗಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *