Connect with us

  LATEST NEWS

  ಕಾರ್ಕಳ – ಸೀರೆ ಜೋಕಾಲಿ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು…!!

  ಕಾರ್ಕಳ ಮೇ 27 : ಸೀರೆಯಲ್ಲಿ ಜೊಕಾಲಿ ಆಟ ಆಡುತ್ತಿದ್ದ ವೇಳೆ ಬಾಲಕಿಯೊಬ್ಬಳ ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ಕಾರ್ಕಳ ನಿಟ್ಟೆಯ ಕೆಮ್ಮಣ್ಣು ಗ್ರಾಮದ ಅಂತೊಟ್ಟು ಎಂಬಲ್ಲಿ ಈ ಅವಘಡ ಸಂಭವಿಸಿದೆ. ಅಂತೊಟ್ಟು ನಿವಾಸಿ ಪಿರ್ಯಾದಿ ಲಕ್ಷ್ಮಣ್ ಪೂಜಾರಿ ಎಂಬವರ ಮಗಳು 9 ವರ್ಷದ ಮಾನ್ವಿ ಜೀವ ಕಳೆದುಕೊಂಡ ಬಾಲಕಿಯಾಗಿದ್ದಾಳೆ.


  ಮೇ 26ರ ಸಂಜೆ 4:00 ಗಂಟೆಗೆ ಮನೆ ಪರಿಸರದಲ್ಲಿ ಸಂಬಂಧಿಕ ಚಿಕ್ಕಪ್ಪ ಉದಯ ಪೂಜಾರಿ ಎಂಬವರ ಮನೆಯ ಬಳಿ ನೆರೆ ಮನೆಯ ದೀಕ್ಷಾ ಎಂಬಾಕೆಯ ಜೊತೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಮಾನ್ವಿಯ ಕುತ್ತಿಗೆಗೆ ಸುತ್ತಿಕೊಂಡಿತ್ತು. ಈ ವೇಳೆ ತುರ್ತು ಚಿಕಿತ್ಸೆಗೆಂದು ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕಿಯನ್ನು ಕರೆದೊಯ್ಯಲಾಗಿತ್ತು. ವೈದ್ಯಾಧಿಕಾರಿಯವರು ಮಾನ್ವಿಯನ್ನು ಆರೋಗ್ಯ ತಪಾಸಣೆ ನಡೆದಿದ್ದು, ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply