Connect with us

    LATEST NEWS

    ಉಡುಪಿ – ಕಾಂಕ್ರೀಟ್ ಮಿಕ್ಸರ್ ಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ

    ಉಡುಪಿ ಮೇ 27: ಕಂಟೈನರ್ ಲಾರಿಯೊಂದು ಕಾಂಕ್ರೀಟ್ ಮಿಕ್ಸರ್ ಲಾರಿಗೆ ಗುದ್ದಿದ ಪರಿಣಾಮ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉದ್ಯಾವರ ಸೇತುವೆ ಬಳಿಯ ಫಾರೆಸ್ಟ್ ಗೇಟ್ ಎಂಬಲ್ಲಿ ನಡೆದಿದೆ.


    ಕಂಟೇನರ್ ಲಾರಿ ಹಿಂದಿನಿಂದ ಬಂದು ಕಾಂಕ್ರೀಟ್ ಮಿಕ್ಸರ್‌‌ಗೆ ಢಿಕ್ಕಿ ಹೊಡೆದಿದ್ದು, ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡು ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.


    ಅಪಘಾತದ ರಭಸಕ್ಕೆ ಲಾರಿಯ ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದ್ದು, ಲಾರಿ ಚಾಲಕನಿಗೆ ತೀವ್ರ ಗಾಯಗೊಂಡಿದ್ದು, ಚಾಲಕನನ್ನು ಹೊರ ತೆಗೆಯಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply