FILM
ನನಗೆ ಗೊತ್ತಿಲ್ಲದೆ ಡೈವೋರ್ಸ್ ಘೋಷಿಸಿದ್ದಾರೆ ಎಂದ ನಟ ಜಯಂ ರವಿ ಪತ್ನಿ ಆರತಿ
ಬೆಂಗಳೂರು ಸೆಪ್ಟೆಂಬರ್ 11: ತಮಿಳಿನ ಖ್ಯಾತ ನಟ ಜಯಂ ರವಿ ವಿಚ್ಚೇದು ಇದೀಗ ವಿವಾದಕ್ಕೆ ಕಾರಣಾಗಿದೆ. ನನಗೆ ತಿಳಿಯದೇ ಜಯಂ ರವಿ ವಿಚ್ಚೇದನ ಘೋಷಿಸಿದ್ದಾರೆ ಎಂದು ಪತ್ನಿ ಆರತಿ ಆರೋಪಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರತಿ ಅವರು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ‘ವಿಚ್ಛೇದನದ ಬಗ್ಗೆ ನನಗೆ ಗೊತ್ತಿಲ್ಲದೆ ಘೋಷಣೆ ಮಾಡಿರುವುದು ಆಘಾತಕಾರಿ ಮತ್ತು ಬೇಸರವನ್ನುಂಟು ಮಾಡಿದೆ. 18 ವರ್ಷಗಳ ಕಾಲ ಪರಸ್ಪರ ಜೀವನವನ್ನು ಹಂಚಿಕೊಂಡಿದ್ದಾಗ ಇಂತಹ ಮಹತ್ವದ ವಿಷಯವನ್ನು ಅದಕ್ಕೆ ಅರ್ಹವಾದ ಗೌರವ ಮತ್ತು ಗೌಪ್ಯತೆಯಿಂದ ನಿರ್ವಹಿಸಬೇಕು ಎಂದು ನಾನು ನಂಬುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಇಬ್ಬರ ಕುಟುಂಬವನ್ನು ಗೌರವಿಸುವ ದೃಷ್ಟಿಯಿಂದ ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವಾರು ಬಾರಿ ಪ್ರಯತ್ನಿಸಿದೆ. ಆದರೆ ಬೇಸರದ ವಿಷಯವೆಂದರೆ ಪರಸ್ಪರ ಮಾತನಾಡಲು ಸಾಧ್ಯವಾಗಲೇ ಇಲ್ಲ. ಈಗ ಅವರು ಮಾಡಿರುವ ದಿಢೀರ್ ಘೋಷಣೆಯಿಂದ ನನಗೆ ಮತ್ತು ನನ್ನ ಮಕ್ಕಳಿಗೆ ಕತ್ತಲೆ ಕವಿದಂತಾಗಿದೆ. ಇದು ಒಂದು ಕಡೆಯ ನಿರ್ಧಾರವಾಗಿದೆ, ಇದರಿಂದ ನಮ್ಮ ಕುಟುಂಬಕ್ಕೆ ಯಾವ ಪ್ರಯೋಜನವಿಲ್ಲ’ ಎಂದಿದ್ದಾರೆ.
‘ಒಬ್ಬ ತಾಯಿಯಾಗಿ ನನಗೆ ನನ್ನ ಮಕ್ಕಳೇ ಮೊದಲ ಆದ್ಯತೆ. ಈ ನಿರ್ಧಾರ ಮಕ್ಕಳ ಮೇಲೆ ಪರಿಣಾಮ ಬೀರಲು ಅವಕಾಶ ಕೊಡುವುದಿಲ್ಲ, ಅಲ್ಲದೆ ಈ ಆಧಾರರಹಿತ ಆರೋಪಗಳನ್ನೂ ಹೀಗೆಯೇ ಬಿಡುವುದಿಲ್ಲ’ ಎಂದಿದ್ದಾರೆ.
You must be logged in to post a comment Login