DAKSHINA KANNADA
ಮಂಗಳೂರು : ಸಂಘನಿಕೇತನ 77ನೇ ವರ್ಷದ ಗಣೇಶೋತ್ಸವ ಸಂಪನ್ನ, ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ…!
ಮಂಗಳೂರು : ಮಂಗಳೂರು ನಗರದ ಸಂಘನಿಕೇತನದ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ವೈಭವದ ತೆರೆ ಬಿದ್ದಿದೆ.
ಕಳೆದ 5 ದಿನಗಳಿಂದ ಸಂಘನಿಕೇತನಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶನ ವಿಗ್ರಹದ ಶೋಭಾಯಾತ್ರೆ ಬುಧವಾರ ಸಂಜೆ ವೈಭವದಿಂದ ನಡೆಯಿತು. ಉತ್ಸವ ಸ್ಥಳದಿಂದ ಕೇರಳದ ಚೆಂಡೆ, ಶಂಖ, ಜಾಗಟೆ, ಕುಣಿತ ಭಜನೆ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ಹೊರಟಿತು.
ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ , ಗಣೇಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶೋಭಾಯಾತ್ರೆ ಸಾಗುವ ಬೀದಿಯನ್ನು ಹೂವು, ವಿದ್ಯುತ್ ದೀಪ, ಭಗವಾಧ್ವಜಗಳಿಂದ ಅಲಂಕರಿಸಿದ್ದರು. ಶೋಭಾ ಯಾತ್ರೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶ್ರೀ ದೇವರ ಶೋಭಾ ಯಾತ್ರೆ ಮಣ್ಣಗುಡ್ಡ, ನ್ಯೂಚಿತ್ರ ಜಂಕ್ಷನ್, ರಥಬೀದಿಯಾಗಿ ಸಾಗಿ ಬಂದು ಶ್ರೀ ಮಹಾಮಾಯ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ.
ಚಿತ್ರ : ಮಂಜು ನೀರೇಶ್ವಾಲ್ಯ
You must be logged in to post a comment Login