Connect with us

    LATEST NEWS

    ಆಟೋ ಅಪಘಾತದಲ್ಲಿ ತಾಯಿಯ ರಕ್ಷಿಸಿದ ಧೀರ ಬಾಲಕಿಗೆ ಮಂಗಳೂರು ಪೊಲೀಸ್ ಆಯುಕ್ತರಿಂದ ಗೌರವದ ಸಮ್ಮಾನ..!

    ಮಂಗಳೂರು: ಮಂಗಳೂರು ನಗರದ ಹೊರವಲಯದ ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ತಾಯಿಗೆ ರಿಕ್ಷಾ ಢಿಕ್ಕಿಯಾಗಿ ಅದರಡಿಗೆ ಬಿದ್ದಿದ್ದ ತಾಯಿಯನ್ನು ತತ್‌ಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಧೀರ ಬಾಲಕಿ ವೈಭವಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ (IPS)  ಅವರು ತಮ್ಮ ಕಚೇರಿಗೆ ಕರೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಸಮ್ಮಾನಿಸಿದರು.

    ಬಾಲಕಿ ವೈಭವಿಗೆ ಪೇಟ, ಹಾರ ತೊಡಿಸಿ, ಫಲಪುಷ್ಪ ಮತ್ತು ಪ್ರಶಂಸನಾ ಪತ್ರ ನೀಡಿ ಆಯುಕ್ತರು ಗೌರವಿಸಿದರು. ಈ ಸಂದರ್ಭ ಡಿಸಿಪಿ ( ಕಾನೂನು ಸುವ್ಯವಸ್ಥೆ) ಸಿದ್ದಾರ್ಥ ಗೋಯೆಲ್ (IPS) , ಡಿಸಿಪಿ ( ಅಪರಾಧ & ಸಂಚಾರ) P B ದಿನೇಶ್ ಕುಮಾರ್, ACP (ಸಂಚಾರ) ನಜ್ಮಾ ಫಾರೂಕಿ, ಪೊಲೀಸ್ ಇನ್ಸ್‌ಪೆಕ್ಟರ್‌( ಸಂಚಾರ) ಗಳಾದ ಮಹಮ್ಮದ್ ಶರೀಫ್, ಹುಲಗಪ್ಪ D ಅವರುಗಳು, ಬಾಲಕಿಯ ಪೋಷಕರು ಉಪಸ್ಥಿರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply