BANTWAL
ವಿಟ್ಲದಲ್ಲಿ ಹನಿ ಟ್ರ್ಯಾಪ್ , ಯುವಕನ ಮುಖ-ಮೂತಿ ಸೂಪ್
ವಿಟ್ಲದಲ್ಲಿ ಹನಿ ಟ್ರ್ಯಾಪ್ , ಯುವಕನ ಮುಖ-ಮೂತಿ ಸೂಪ್
ಬಂಟ್ವಾಳ, ಅಕ್ಟೋಬರ್ 21 : ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ ಯುವಕನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ಲಪಟಾಯಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಕುಡ್ತಮುಗೇರು ಎಂಬಲ್ಲಿರುವ ಇಂದು ಮುಂಜಾನೆ ಮೂರು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಹೆಣ್ಣಿನ ಆಸೆಗೆ ಬಲಿಯಾದ ಯುವಕನನ್ನು ಅನಾಯಾಸವಾಗಿ ತಮ್ಮ ಬಲೆಗೆ ಬೀಳಿಸಿಕೊಂಡಿದೆ ಈ ತಂಡ.
ಇಂದು ಮುಂಜಾನೆಗೆ ತಮ್ಮ ಹನಿಟ್ರ್ಯಾಪ್ ಜಾಲಕ್ಕೆ ಮೂಹೂರ್ತ ಫಿಕ್ಸ್ ಮಾಡಿತ್ತು.
ಅದರಂತೆ ಈ ಚರ್ಮದ ದಂಧೆ ನಡೆಸಿ ಹಣ ಲಪಟಾಯಿಸುವ ತಂಡದ ಬಲೆಗೆ ಬಿದ್ದ ಹನಿಫ್ ಎನ್ನುವ ಯುವಕನನ್ನು ಮನಸೋ ಬಂದಂತೆ ಥಳಿಸಿದೆ.
ಆತನ ಮಾರುತಿ ಸ್ವಿಫ್ಟ್ ಕಾರು, 7 ಪವನ್ ಚಿನ್ನ ಹಾಗೂ ನಗದನ್ನು ಲೂಟಿ ಮಾಡಿ ಪರಾರಿಯಾಗಿದೆ.
ಇದೀಗ ಹೆಣ್ಣೂ ಇಲ್ಲ , ಹೊನ್ನೂ ಇಲ್ಲದೆ ಆರೋಪಿಗಳ ಥಳಿತಕ್ಕೆ ಒಳಗಾದ ಯುವಕ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ಹಿನ್ನಲೆ:
ಮೂಡಬಿದಿರೆಯ ಜಲ್ಲಿ ಕ್ರಶರ್ ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಮ್ಮದ್ ಹನೀಫ್ ಗೆ ಮೂರು ತಿಂಗಳ ಹಿಂದೆ ಫರ್ಜಾನಾ ಎನ್ನುವ ಯುವತಿಯ ಪರಿಚಯ ಫೇಸ್ಬಕ್ ,ವಾಟ್ಸ್ ಅಪ್ ಮೂಲಕ ಆಗಿದೆ.
ಇದೇ ಪರಿಚಯದ ಹಿನ್ನಲೆಯಲ್ಲಿ ಅಕ್ಟೋಬರ್ 20 ರ ಶುಕ್ರವಾರ ಫರ್ಜಾನಾ ಹನೀಫ್ ಗೆ ಫೋನ್ ಮಾಡಿ ತನಗೆ 5 ಸಾವಿರ ರೂಪಾಯಿ ಅರ್ಜೆಂಟ್ ಬೇಕಾಗಿದೆ ಎಂದು ವಿನಂತಿಸಿದ್ದಾಳೆ ಮತ್ತು ಮುಡಿಪುನಲ್ಲಿ ಮೀಟ್ ಆಗುತ್ತೇನೆ ಎಂದೂ ತಿಳಿಸಿದ್ದಾಳೆ.
ಹೆಂಡತಿ ಮತ್ತು ಮಗುವನ್ನು ಅತ್ತೆ ಮನೆಗೆ ಕಳುಹಿಸಿದ್ದ ಮಹಮ್ಮದ್ ಹನೀಫ್ ತನ್ನ ಶಿಫ್ಟ್ ಕಾರಿನೊಂದಿಗೆ ಮುಡಿಪಿಗೆ ಬಂದಿದ್ದಾನೆ.
ಬಳಿಕ ಕುಡ್ತಮುಗೇರಿನಲ್ಲಿರುವ ತನ್ನ ಫ್ಲಾಟ್ ಗೆ ಆಕೆಯನ್ನು ಕರೆದೊಯ್ದಿದ್ದಾನೆ.
ಆದರೆ ಫ್ಲಾಟ್ ನ ಒಳಗೆ ಹೋಗುವ ಸಂದರ್ಭದಲ್ಲಿ ಟ್ರವೇರಾ ಕಾರಿನಲ್ಲಿ ಬಂದ ಐವರು ಯುವಕರು ಹಾಗೂ ಒರ್ವ ಯುವತಿಯಿದ್ದ ತಂಡ ತಂಡದ ಜೊತೆ ಸೇರಿಕೊಂಡ ಫರ್ಜಾನಾ ಹನೀಫ್ ನನ್ನು ರೂಮಿನೊಳಗೆ ತಳ್ಳಿದ್ದಾರೆ.
ಬಳಿಕ ಫರ್ಜಾನಾ ಹಾಗೂ ತಂಡದಲ್ಲಿದ್ದ ಇನ್ನೋರ್ವ ಯುವತಿ ಬಟ್ಟೆ ಬಿಚ್ಚಿ, ಹನೀಫ್ ನ ಬಟ್ಟೆಯನ್ನೂ ಬಲವಂತವಾಗಿ ಬಿಚ್ಚಿದ್ದಾರೆ. ಬಳಿಕ ತಂಡ ಮೂವರ ನಗ್ನ ಫೋಟೋವನ್ನು ತೆಗೆದು ಹನೀಫ್ ನಲ್ಲಿ ಐದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ.
ಹಣ ಇಲ್ಲ ಎಂದಾಗ ಫ್ಲಾಟ್ ನ ಗೋದ್ರೇಜ್ ನಲ್ಲಿದ್ದ 7 ಪವನ್ ಚಿನ್ನದ ಸರ, ಶಿಪ್ಟ್ ಕಾರು ಹಾಗೂ ಅದರ ದಾಖಲೆ ಪತ್ರಗಳನ್ನು ಎಗರಿಸಿ ತಂಡ ಪರಾರಿಯಾಗಿದೆ.
ವಿಟ್ಲ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.