ಬಂಟ್ವಾಳ, ಮಾರ್ಚ್ 22: ಕರ್ನಾಟಕದ ಸ್ಪೈಡರ್‌ ಮ್ಯಾನ್‌ ಎಂದೆ ಪ್ರಸಿದ್ದಿ ಪಡೆದಿರುವ ಜ್ಯೋತಿರಾಜ್‌ ಅವರು, ಇತಿಹಾಸ ಪ್ರಸಿದ್ದ ಕಾರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ.

ಮಾ.23 ರ ಬೆಳಿಗ್ಗೆ 10 ಗಂಟೆಗೆ ಸಮುದ್ರಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಕಾಮರಿಂಜೇಶ್ವರ ಬೆಟ್ಟವನ್ನು ಏರುತ್ತಿದ್ದೇನೆ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಬೆಟ್ಟ ಹತ್ತಲು ಎಲ್ಲಾ ರೀತಿಯ ಅನುಮತಿ ದೊರೆತಿದೆ.

ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಜನತೆ ಸಹಕರಿಸಬೇಕು ಎಂದವರು ಮನವಿ ಮಾಡಿದ್ದಾರೆ.

Share Information