BANTWAL
ಕೊನೆಗೂ ಮನೆ ಸೇರಿದ ಫರಂಗಿಪೇಟೆಯ ದಿಗಂತ್

ಬಂಟ್ವಾಳ ಮಾರ್ಚ್ 13: ರಾಜ್ಯದಲ್ಲಿ ಸುದ್ದಿಯಲ್ಲಿದ್ದ ಫರಂಗಿಪೇಟೆಯ ಪಿಯುಸಿ ವಿಧ್ಯಾರ್ಥಿ ದಿಗಂತ್ ಪ್ರಕರಣ ಸುಖಾಂತ್ಯ ಕಂಡಿದೆ. ಮನೆಗೆ ಹೋಗವುದಿಲ್ಲ ಎಂದು ಹಠ ಹಿಡಿದಿದ್ದ ದಿಗಂತ್ ಕೊನೆಗೂ ಮನವೊಲಿಸಿ ತಾಯಿ ಜೊತೆ ಕಳುಹಿಸಿಕೊಡಲಾಗಿದೆ. ಬುಧವಾರ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಯ ಸಭೆ ನಡೆದು ಸಂಜೆಯ ವೇಳೆಗೆ ದಿಗಂತ್‌ನನ್ನು ತಾಯಿಯ ಜತೆಗೆ ಮನೆಗೆ ಕಳುಹಿಸಿಕೊಡಲಾಗಿದೆ.
ಹೈಕೋರ್ಟ್ ನಲ್ಲಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ವೇಳೆ ಪತ್ತೆಯಾಗಿರುವ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂಬ ವಿಚಾರ ಚರ್ಚೆಗೆ ಕಾರಣವಾಗಿದ್ದು, ಆತ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಯ ಮುಂದೆ ಮನೆಗೆ ಹೋಗಲು ಒಪ್ಪಿದರೆ ಮನೆಗೆ ಕಳುಹಿಸಿಕೊಡಬಹುಗಿದ್ದು, ಈ ವಿಚಾರದಲ್ಲಿ ಸಿಡಬ್ಲ್ಯೂಸಿ ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ ಎಂದು ನ್ಯಾಯಾಲಯ ಸೂಚಿಸಿತ್ತು. ದಿಗಂತ್‌ನ ಹೇಳಿಕೆ ಪಡೆದ ಸಂದರ್ಭ ಆತ ಮನೆಗೆ ಹೋಗುವುದಾಗಿ ಹೇಳಿದ್ದು, ಹೀಗಾಗಿ ತಾಯಿಯ ಜತೆ ಕಳುಹಿಸಿ ಕೊಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಡಾ| ಅಕ್ಷತಾ ತಿಳಿಸಿದ್ದಾರೆ. ಪೊಲೀಸ್ ವಿಚಾರಣೆಗೆ ದಿಗಂತ್‌ನ ಅವಶ್ಯಕತೆ ಇದೆಯೇ ಎಂದು ಇಲಾಖೆಯ ಬಳಿಯೂ ಕೇಳಲಾಗಿದ್ದು, ಮನೆಗೆ ಕಳುಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಇಲಾಖೆಯೂ ಸ್ಪಷ್ಟಪಡಿಸಿದೆ.

1 Comment