DAKSHINA KANNADA
ಲಂಚ ಸ್ವೀಕರಿಸಿ ಸಿಕ್ಕಿಹಾಕಿಕೊಂಡ ವಜಾಗೊಂಡ ಪೇದೆಗೆ ಸಜಾ
ಲಂಚ ಸ್ವೀಕರಿಸಿ ಸಿಕ್ಕಿಹಾಕಿಕೊಂಡ ವಜಾಗೊಂಡ ಪೇದೆಗೆ ಸಜಾ
ಮಂಗಳೂರು, ಅಕ್ಟೋಬರ್ 21: 2010 ರಲ್ಲಿ ಮಂಗಳೂರಿನಲ್ಲಿ ನಡೆದ ಸೂರ್ಯಮಣಿ ಹರಳಿನ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡದೆ ಇರಲು ವ್ಯಕ್ತಿಯೋರ್ವನಿಂದ 12 ಸಾವಿರ ಲಂಚ ಪಡೆದ ಆರೋಪಿ ಪೋಲೀಸ್ ಪೇದೆಗೆ ಮಂಗಳೂರು ಲೋಕಾಯುಕ್ತ ಕೋರ್ಟ್ ನಲ್ಲಿ ಶಿಕ್ಷೆ ಪ್ರಕಟ. 27.01.2010 ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು , ಈ ಸಂದರ್ಭದಲ್ಲಿ ಮೂಡಬಿದ್ರೆ ಪೋಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ ಸುನಿಲ್ ಕುಮಾರ್ ಸೂರ್ಯಮಣಿ ಹರಳಿನ ಕೇಸ್ ನಲ್ಲಿ ಆರೋಪಿಯಾಗಿರುವ ಬಿ.ಎಮ್.ಜಲೀಲ್ ಎಂಬಾತನ ಹೆಸರನ್ನು ಬಿಡಬೇಕಾದರೆ 12 ಸಾವಿರ ರೂಪಾಯಿ ನೀಡಬೇಕೆಂದು ಆರೋಪಿಯಲ್ಲಿ ಬೇಡಿಕೆ ಇಟ್ಟಿದ್ದ.
ಈ ಸಂಬಂಧ ಮಂಗಳೂರು ಲೋಕಾಯುಕ್ತ ಪೋಲೀಸರಿಗೆ ಮಾಹಿತಿ ನೀಡಿದ ಜಲೀಲ್ ಪೋಲೀಸ್ ಪೇದೆಗೆ ಹಣ ನೀಡುತ್ತಿದ್ದ ಸಂದರ್ಭದಲ್ಲಿ ಆಗಿನ ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ಆಗಿದ್ದ ಉದಯ್ ಕುಮಾರ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ಸಂಬಂಧ ಸುನಿಲ್ ಕುಮಾರ್ ನನ್ನು 2012 ರಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ಮಂಗಳೂರು ಲೋಕಾಯುಕ್ತ ನ್ಯಾಯಾಲಯ ಆರೋಪಿ ಸುನಿಲ್ ಕುಮಾರ್ ಗೆ 1 ವರ್ಷ ಸಾದಾ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ , ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ವಾದಿಸಿದ್ದರು.
You must be logged in to post a comment Login