Connect with us

LATEST NEWS

ಮಲ್ಪೆಯಲ್ಲಿ ಭರ್ಜರಿ ಪಾಂಫ್ರೆಟ್, ಬಂಗುಡೆ ಮೀನಿನ ಬೇಟೆ

ಮಲ್ಪೆಯಲ್ಲಿ ಭರ್ಜರಿ ಪಾಂಫ್ರೆಟ್, ಬಂಗುಡೆ ಮೀನಿನ ಬೇಟೆ

ಉಡುಪಿ ಅಗಸ್ಟ್ 31: ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಕೂಡ ಸರಿಯಾದ ಮೀನು ಸಿಗದೇ ಮೀನುಗಾರರು ಸಂಕಷ್ಟದಲ್ಲಿದ್ದರು. ಈ ಸೀಸನ್ ನಲ್ಲಿ ಆಗೊಮ್ಮೆ ಈಗೊಮ್ಮೆ ಒಂದಿಷ್ಟು ಮೀನು ಕಾಣುತ್ತಿದ್ದು, ಮಲ್ಪೆಯಲ್ಲಿ ಭರ್ಜರಿ ಪಾಂಫ್ರೆಟ್ ಮೀನುಗಳು ರಾಶಿ ರಾಶಿ ದಡ ಸೇರಿ ಏಲಂ ನಡಿತಾ ಇದೆ.

ಇನ್ನೊಂದು ಕಡೆಯಲ್ಲಿ ಮತ್ಸ್ಯ ಬೇಟೆಗೆ ತೆರಳಿದ್ದ ನಾಡದೋಣಿಯ ಮೀನುಗಾರರ ತಂಡಕ್ಕೆ ಬಂಗುಡೆ ಮೀನು ರಾಶಿ ರಾಶಿಯಾಗಿ ಬಲೆ ಬಿದ್ದಿದೆ. ವೃತ್ತಿ‌‌ ಬಾಂಧವರ ಸಾಪತ್ತೆಯಿಂದ ಹಿಡಿದು ಕಷ್ಟದ ದಿನಗಳನ್ನು ಕಂಡಿದ್ದ ಮೀನುಗಾರರಿಗೆ ರಾಶಿ ರಾಶಿ ಮೀನು ಬಲೆಗೆ ಬಿದ್ದಿರುವುದು ಸದ್ಯ ಸಂತಸ ತಂದಿದೆ.

VIDEO

Facebook Comments

comments