ಪ್ರಮೋದ್ ಮಧ್ವರಾಜ್ ವಿಚಾರ ಹರ್ಷ ಮೊಯ್ಲಿ ವಿರುದ್ಧ ಕೈ ನಾಯಕ ಕಿಡಿ

ಉಡುಪಿ ಸೆಪ್ಟೆಂಬರ್ 1: ಮಾಜಿ ಸಿಎಂ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್ ಮಧ್ಯೆ ನಡೆದ ವಾಗ್ವಾದದ ಆಡಿಯೋ ಕರಾವಳಿಯಲ್ಲಿ ಈಗ ವೈರಲ್ ಆಗಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕುರಿತಂತೆ ನಡೆದ ಮಾತುಕತೆ ವಾಗ್ವಾದಕ್ಕೆ ತಿರುಗಿದೆ. ಮಾಜಿ ಸಚಿವ ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾರೋ ಕಾಂಗ್ರೆಸ್‍ಗೆ ಬಂದಿದ್ದಾರೋ ಎಂದು ಕರಾವಳಿಯಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಇದೇ ವಿಚಾರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರನ ಜೊತೆ ಕಾಂಗ್ರೆಸ್ ನಾಯಕನ ಫೋನ್ ಸಂಭಾಷಣೆ ವೈರಲಾಗಿದೆ.

ನಿನ್ನೆ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಲ್ಲಿಲ್ಲ ಎಂದು ಹೇಳಿದ್ದ ಮಾಜಿ ಸಿಎಂ ವೀರಪ್ಪ ಮೊಯಿಲಿ ತಿಳಿಸಿದ್ದರು. ಅಲ್ಲದೆ ಪ್ರಮೋದ್ ಜೆಡಿಎಸ್ ನಲ್ಲಿದ್ದಾರೆ. ಅರ್ಜಿ ಹಾಕಿದರೆ ಮತ್ತೆ ಕಾಂಗ್ರೆಸ್ಸಿಗೆ ಬರಬಹುದು ಅಂದಿದ್ದರು. ಈ ಹೇಳಿಕೆ ಕಾಂಗ್ರೇಸ್ ನ ಸ್ಥಳೀಯ ಕಾರ್ಯಕರ್ತರರನ್ನು ಕೆರಳಿಸಿದೆ.

ಸುದ್ದಿಗೋಷ್ಠಿಯ ನಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಅಮೀನ್ ಅವರು ಹರ್ಷ ಮೊಯ್ಲಿಗೆ ಕರೆ ಮಾಡಿ ಪ್ರಮೋದ್ ಮಧ್ವರಾಜ್ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಹರ್ಷ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾನೆ ಎಂದು ಹೇಳುವ ಮೂಲಕ ಏಕವಚನ ಬಳಕೆ ಮಾಡಿದ್ದಾರೆ. ಇದರಿಂದ ಕುಪಿತರಾದ ಸದಾಶಿವ್, ಪದಾಧಿಕಾರಿ ಅಲ್ಲದೆ ಇದ್ದರೂ ನೀವ್ಯಾಕೆ ಕಾಂಗ್ರೆಸ್ ಸಭೆಯಲ್ಲಿ, ಸುದ್ದಿಗೋಷ್ಠಿಯಲ್ಲಿ ಕೂತಿದ್ದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಮೋದ್ ಗೆ ಗೌರವ ಕೊಟ್ಟು ಮಾತಾಡಿ ಎಂದು ಕಿಡಿಕಾರಿದ್ದಾರೆ. ತುಳು ಭಾಷೆಯ ಈ ಸಂಭಾಷಣೆ ವೈರಲ್ ಆಗಿದೆ.

VIDEO

Facebook Comments

comments