Connect with us

  FILM

  ಹೃದಯಾಘಾತದಿಂದ ನಿಧನರಾದ ಕನ್ನಡ ಖ್ಯಾತ ನಿರ್ದೇಶಕ ಕಿರಣ್ ಗೋವಿ

  ಬೆಂಗಳೂರು ಮಾರ್ಚ್ 26: ಹೃದಯಾಘಾತದಿಂದ ಕನ್ನಡ ಚಿತ್ರರಂಗದ ನಿರ್ದೇಶಕ ಕಿರಣ್ ಗೋವಿ ನಿಧನರಾಗಿದ್ದಾರೆ.ಪಯಣ , ಸಂಚಾರಿ, ಯಾರಿಗುಂಟು ಯಾರಿಗಿಲ್ಲ, ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ನಿರ್ದೇಶಕ ಕಿರಣ್‌ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  ಬುಧವಾರದಂದು ಹೃದಯಾಘಾತವುಂಟಾಗಿತ್ತು. ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ. ಯುವ ನಿರ್ದೇಶಕನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಸಂತಾಪ ಸೂಚಿಸಿದ್ದಾರೆ.
  ಕಿರಣ್ ಗೋವಿ ಮೂಲತಃ ತುಮಕೂರಿನವರು. ಆದರೆ ಅವರ ಶಿಕ್ಷಣ ಮಾಡಿದ್ದು ಬೆಂಗಳೂರಿನಲ್ಲಿ. ಅವರ ತಂದೆ ದೂರವಾಣಿಗೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಕಾರಣ ಕಿರಣ್ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply