Connect with us

LATEST NEWS

ಭಾರೀ ಸುಂಟರಗಾಳಿಗೆ ತತ್ತರಿಸಿದ ಅಮೆರಿಕ ; ಹಲವು ಪಟ್ಟಣಗಳು ನಾಶ, 25ಕ್ಕೂ ಅಧಿಕ ಜನರ ಸಾವು!

ಅಮೇರಿಕಾ ಮಾರ್ಚ್ 26: ಭೀಕರ ಸುಂಟರಗಾಳಿಗೆ ಅಮೆರಿಕದ ಮಿಸ್ಸಿಸ್ಸಿಪ್ಪಿ ನಗರ ತತ್ತರಿಸಿದೆ. ಶುಕ್ರವಾರ ತಡರಾತ್ರಿ ಅಪ್ಪಳಿಸಿದ ಸುಂಟರಗಾಳಿಗೆ ಮಿಸ್ಸಿಸ್ಸಿಪ್ಪಿಯಲ್ಲಿ ಕನಿಷ್ಟ 25 ಜನ ಸಾವನ್ನಪ್ಪಿದ್ದು, ಅಲಬಾಮಾದಲ್ಲಿ ಒಂದು ಸಾವಿನ ವರದಿಯಾಗಿದೆ. ಹಲವಾರು ಜನ ಗಾಯಗೊಂಡಿದ್ದಾರೆ. ಬಿರುಗಾಳಿಯ ತೀವ್ರತೆಗೆ ಹಲವು ಪಟ್ಟಣಗಳು ಧ್ವಂಸವಾಗಿದ್ದು, ಜನ ಬೀದಿಗೆ ಬಿದ್ದಿದ್ದಾರೆ.


ಪ್ರಬಲ ಚಂಡಮಾರುತದೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ. ಗಾಳಿಗೆ ಹಲವೆಡೆ ಕಟ್ಟಡಗಳು ಕುಸಿದು ಬಿದ್ದಿದ್ದು, ಮನೆಯ ಮೇಲ್ಛಾವಣಿ ಹಾರಿ ಹೋಗಿವೆ.

ವಾಹನಗಳು ಜಖಂಗೊಂಡಿವೆ. ವಿದ್ಯುತ್ ಸಂಪರ್ಕ ಕಡಿತದಿಂದಾಗಿ 10,000ಕ್ಕೂ ಹೆಚ್ಚು ಮಂದಿಗೆ ತೊಂದರೆ ಎದುರಾಗಿದೆ. ಮಿಸಿಸಿಪ್ಪಿಯ ರಾಲಿಂಗ್ ಫಾರ್ಕ್ ಪಟ್ಟಣದಲ್ಲಿ 2,000ದಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ.

Advertisement
Click to comment

You must be logged in to post a comment Login

Leave a Reply