ಫೈರ್ ಸೇಫ್ಟಿ ಇಲ್ಲದ ಸಿಟಿ ಸೆಂಟರ್ ನಲ್ಲಿ ಅಗ್ನಿ ಅವಘಡ

ಮಂಗಳೂರು, ಫೆಬ್ರವರಿ 21: ಮಂಗಳೂರು ನಗರದ ಪ್ರತಿಷ್ಟಿತ ಮಳಿಗೆಯಾದ ಸಿಟಿ ಸೆಂಟರ್ ನ ಏಳನೇ ಮಹಡಿಯಲ್ಲಿ ಶಾಟ್ ಸರ್ಕೂಟ್ ನಿಂದಾಗಿ ಬೆಂಕಿ ಹಚ್ಚಿಕೊಂಡಿದೆ.

ಏಳನೇ ಮಹಡಿಯಲ್ಲಿರುವ ಎಸಿ ಚೇಂಬರ್ ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಹೊಗೆಯಿಂದಾಗಿ ಮಾಲ್ ನಲ್ಲಿರುವ ಜನರಿಗೆ ಉಸಿರಾಟಕ್ಕೂ ತೊಂದರೆಯುಂಟಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ಸಿಟಿ ಸೆಂಟರ್ ಮಾಲ್ ಮಂಗಳೂರಿನಲ್ಲಿ ಆರಂಭಗೊಂಡು ಏಳೆಂಟು ವರ್ಷಗಳೇ ಕಳೆದರೂ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಷ್ಟಿ ಕ್ಲಿಯರೆನ್ಸ್ ಅನ್ನು ಅಗ್ನಿಶಾಮಕ ಇಲಾಖೆ ನೀಡಿಲ್ಲ.

ಅಧಿಕಾರಿಗಳ, ಜನಪ್ರತಿನಿಧಿಗಳ ಶಿಫಾರಿಸ್ಸಿನ ಮೇಲೆ ಇಂದಿನವರೆಗೂ ನಡೆದುಕೊಂಡು ಬಂದಿರುವ ಈ ಮಳಿಗೆಯಲ್ಲಿ ಇದೀಗ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಸಂಪೂರ್ಣ ಬಂದ್ ಆಗಿರುವ ಈ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದಲ್ಲಿ ಅಗ್ನಿಶಾಮಕ ದಳಕ್ಕೂ ಕಂಟ್ರೋಲ್ ಮಾಡಲಾರದಂತಹ ಸ್ಥಿತಿಯಿರುವ ಕಾರಣ ಅಗ್ನಿಶಾಮಕ ದಳ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ನೀಡಿಲ್ಲ.

VIDEO

Facebook Comments

comments