LATEST NEWS
ಕಾಂತಾರ ಸಿನೆಮಾವನ್ನು ಖಂಡಿತ ನೋಡಬೇಕು – ತಮಿಳ ಸೂಪರ್ ಸ್ಟಾರ್ ಧನುಷ್
ಚೆನ್ನೈ ಅಕ್ಟೋಬರ್ 14: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರಕ್ಕೆ ಇದೀಗ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ತಮಿಳಿನ ಸೂಪರ್ ಸ್ಟಾರ್ ನಟ ಧನುಷ್ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗೈದಿದ್ದಾರೆ.
‘ಕಾಂತಾರ ಮನಸ್ಸಿಗೆ ಹಿತವಾದ ಚಿತ್ರವಾಗಿದ್ದು, ಖಂಡಿತವಾಗಿಯೂ ನೋಡಲೇಬೇಕು. ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು . ಹೊಂಬಾಳೆ ಫಿಲಂಸ್ ಗೆ ಅಭಿನಂದನೆಗಳು, ಗಡಿಯನ್ನು ತಳ್ಳುತ್ತಲೇ ಇರಿ . ಚಿತ್ರದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ಒಂದು ದೊಡ್ಡ ಅಪ್ಪುಗೆ. ದೇವರ ಆಶೀರ್ವಾದ ಇರಲಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
You must be logged in to post a comment Login