Connect with us

    LATEST NEWS

    ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಯೂಟ್ಯೂಬ್‌ ಚಿತ್ರ ವಿಮರ್ಶಕ..ವಿಡಿಯೋ ವೈರಲ್

    ಮುಂಬೈ ಅಕ್ಟೋಬರ್ 14: ಇಡೀ ಭಾರತದ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ಕಾಂತಾರ ಚಿತ್ರ ಇದೀಗ ಭಾರತದ ಇತರ ಭಾಷೆಗಳಲ್ಲೂ ಡಬ್ ಆಗುತ್ತಿದ್ದು, ಇದೀಗ ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಿದೆ.


    ಈ ಹಿನ್ನಲೆ ರಿಷಬ್ ಶೆಟ್ಟಿ ತಮ್ಮ ಚಿತ್ರತಂಡವನ್ನು ಪ್ರಚಾರಕ್ಕಾಗಿ ಮುಂಬೈ ಗೆ ಕರೆದುಕೊಂಡು ಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಹಿಂದಿ ಯೂಟ್ಯೂಬ್‌ ಚಿತ್ರ ವಿಮರ್ಶಕರೊಬ್ಬರು ರಿಷಬ್‌ ಅವರ ಕಾಲಿಗೆ ಬಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕನ್ನಡ ಸಿನಿಮಾದ ಗತವೈಭವ ಎಂಬ ಟ್ಯಾಗ್‌ಲೈನ್‌ನಲ್ಲಿ ಎಲ್ಲೆಡೆ ಹರಿದಾಡುತ್ತಿದೆ.


    ಹಿಂದಿ ಯೂಟ್ಯೂಬ್‌ ವಿಮರ್ಶಕ ಸೂರಜ್‌ ಕುಮಾರ್‌ ಎಂಬಾತ ರಿಷಬ್‌ ಅವರನ್ನು ತಬ್ಬಿಕೊಂಡು ಕಾಲಿಗೆ ನಮಸ್ಕರಿಸಿದ್ದಾನೆ. ನೀವು ಎಂಥ ಅದ್ಭುತ ಸಿನಿಮಾ ಮಾಡಿದ್ದೀರಿ ಸರ್‌ . ನಾನು ತಮಾಷೆಗೆ ಮಾಡುತ್ತಿಲ್ಲ, ಈ ರೀತಿ ನಾನು ಯಾರ ಪಾದವನ್ನು ಮುಟ್ಟಿ ನಮಸ್ಕಾರ ಮಾಡಿಲ್ಲ. ಆದರೆ ಸಿನಿಮಾದಲ್ಲಿನ ನಿಮ್ಮ ನಟನೆಯನ್ನು ನೋಡಿ ನನಗೆ ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂಬುದಾಗಿ ಸೂರಜ್‌ ಹೇಳಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply