Connect with us

  LATEST NEWS

  ದಿಢೀರ್ ಕುಸಿದ ಶಂಕರಪುರ ಮಲ್ಲಿಗೆ ರೇಟ್….!!

  ಉಡುಪಿ ಮೇ 09: ಕರಾವಳಿಯ ಜಿಲ್ಲೆಗಳಲ್ಲಿ ಮದುವೆ ಸೀಸನ್ ಮುಗಿದಿದ್ದು, ಇದರ ನಡುವೆಯೇ ಶಂಕರಪುರಮಲ್ಲಿಗೆಯ ರೇಟ್ ದಿಢೀರ್ ಕುಸಿತ ಕಂಡಿದೆ.


  ಕರಾವಳಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೂ ಶಂಕರಪುರ ಮಲ್ಲಿಗೆ ಇಲ್ಲದೆ ಕಾರ್ಯಕ್ರಮ ನಡೆಯುವುದಿಲ್ಲ. ಹಿಗಾಗಿ ಬೇಸಿಗೆ ಕಾಲದಲ್ಲಿ ಮಲ್ಲಿಗೆಗೆ ಚಿನ್ನದ ರೇಟ್ ಇರುತ್ತದೆ. ಆದರೆ ಈ ಬಾರಿ ಬೇಸಿಗೆ ಹೆಚ್ಚಾಗಿದ್ದು, ಮಲ್ಲಿಗೆಯ ಬೆಳೆಯೂ ಚೆನ್ನಾಗಿ ಬಂದಿದೆ. ಆದರೆ ಮೇ ತಿಂಗಳ ಆರಂಭದಲ್ಲೇ ಮದುವೆ ಸೀಸನ್ ಮುಗಿದ ಕಾರಣ ಮಲ್ಲಿಗೆಗೆ ಇದೀಗ ಬೇಡಿಕೆ ಇಲ್ಲ. ಹೀಗಾಗಿ ನಾಲ್ಕು ಚೆಂಡುಗಳ ಒಂದು ಅಟ್ಟಿ ಮಲ್ಲಿಗೆಯು ಮಲ್ಲಿಗೆ ಕಟ್ಟೆಯಲ್ಲಿ ಬುಧವಾರ ₹ 220ಕ್ಕೆ ಸಿಗುತ್ತಿತ್ತು. ಮದುವೆ ಸೀಸನ್‌ನಲ್ಲಿ ಒಂದು ಅಟ್ಟಿಗೆ ₹ 450ರಿಂದ ₹ 850 ವರೆಗೆ ದರ ಏರಿತ್ತು.

  ಮಲ್ಲಿಗೆ ವ್ಯಾಪಾರ ಮದುವೆ ಸೀಸನ್‌ನಲ್ಲಿ ಲಾಭದಾಯಕ. ಈ ಬಾರಿ ಮದುವೆ ಸೀಸನ್ ಮೇ ಮೊದಲ ವಾರದಲ್ಲೇ ಕೊನೆಯಾಗಿದೆ. ಈಗ ಇಳುವರಿ ಹೆಚ್ಚಿದೆ. ಆದರೆ ಕೊಳ್ಳುವವರಿಲ್ಲದ್ದರಿಂದ ಗಿಡದಲ್ಲೇ ಮಲ್ಲಿಗೆ ಹೂ ಬಿಟ್ಟುಬಿಡುವಂತಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply