Connect with us

LATEST NEWS

ಡೆಂಗ್ಯೂ ಜ್ವರಕ್ಕೆ ಸುಳ್ಯದಲ್ಲಿ ಯುವಕ ಬಲಿ

ಸುಳ್ಯ ಜೂನ್ 15: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಹಾವಳಿಯಾದರೆ ಇನ್ನೊಂದೆಡೆ ಡೆಂಗ್ಯೂ ಜ್ವರ ಸದ್ದಿಲ್ಲದೇ ಕಾಟ ಕೊಡಲಾರಂಭಿಸಿದೆ. ಡೆಂಗ್ಯೂ ಜ್ವರಕ್ಕೆ 27 ವರ್ಷ ವಯಸ್ಸಿನ ಯುವಕನೊಬ್ಬ ಬಲಿಯಾಗಿರುವ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಇದು ಕಳೆದ ಒಂದು ವಾರದಲ್ಲಿ ಎರಡನೇ ಪ್ರಕರಣವಾಗಿದೆ.


ಮೃತರನ್ನು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಅವರ ಪುತ್ರ ಶಶಿಕುಮಾರ್ (27) ಎಂದು ಗುರುತಿಸಲಾಗಿದೆ.

ಕಳೆದ 5 ದಿನಗಳ ಹಿಂದೆ ಡೆಂಗ್ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಸೋಮವಾರ ನಿಧನರಾದರೆಂದು ತಿಳಿದುಬಂದಿದೆ. ಇವರು ಸುಬ್ರಹ್ಮಣ್ಯ ದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು.