DAKSHINA KANNADA
ಶವ ಅದಲು ಬದಲು: ಮುಕ್ಕ ಶ್ರೀನಿವಾಸ ಆಸ್ಪತ್ರೆ ಸಿಬ್ಬಂದಿ ಎಡವಟ್ಟು

ಮಂಗಳೂರು, ಮೇ18: ನಗರದ ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಶವಗಾರದಲ್ಲಿ ಸಿಬ್ಬಂದಿ ಎಡವಟ್ಟಿನಿಂದ ಶವ ಅದಲು ಬದಲಾದ ಘಟನೆ ನಡೆದಿದೆ.
ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಸುರತ್ಕಲ್ ರೀಜನ್ ಪಾರ್ಕ್ ನಿವಾಸಿ ಜಗದೀಶ್ ಕುಂದರ್ ಮತ್ತು ಕಾರ್ಕಳ ನಿವಾಸಿ ಸುಧಾಕರ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಜಗದೀಶ್ ಕುಟುಂಬಿಕರು ಶವವನ್ನು ಮನೆಗೆ ಕೊಂಡೊಯ್ದ ವೇಳೆ ಮೃತದೇಹ ಅದಲು ಬದಲಾಗಿದೆ.

ಸದ್ಯ ಎರಡು ಕಡೆಯ ಕುಟುಂಬದವರು ಮೃತದೇಹವನ್ನು ಆಸ್ಪತ್ರೆಗೆ ತಂದು ಬದಲಾಯಿಸಿಕೊಂಡಿದ್ದಾರೆ. ಆಸ್ಪತ್ರೆ ಶವಾಗಾರದಲ್ಲಿದ್ದ ಸಿಬ್ಬಂದಿ ಸರಿಯಾಗಿ ಹೆಸರು ನೋಡದೇ ಮೃತದೇಹ ನೀಡಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.