Connect with us

    DAKSHINA KANNADA

    ಕಾಂಗ್ರೇಸ್ ಗೆ ಪ್ರಧಾನಿಗಳನ್ನು ಅಧಿಕಾರದಿಂದ ಇಳಿಸಿದ ಇತಿಹಾಸವಿದೆ: ನಳಿನ್ ಕುಮಾರ್ ಕಟೀಲ್

    ಪುತ್ತೂರು, ಜುಲೈ 18: ದೇಶದಲ್ಲಿ ಪ್ರಧಾನಿಗಳನ್ನು ಆಯ್ಕೆ ಮಾಡಿ ಬಳಿಕ ಅವರನ್ನು ಕೆಳಗಿಳಿಸಿದ ಪಕ್ಷ ಯಾವುದಾದರೂ ಇದ್ದಲ್ಲಿ ಅದು ಕಾಂಗ್ರೇಸ್ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

    ಪುತ್ತೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಾಜಿ ಪ್ರಧಾನಿಗಳಾದ ವಿ.ಪಿ.ಸಿಂಗ್, ಹೆಚ್.ಡಿ.ದೇವೇಗೌಡ ರನ್ನು ಪ್ರಧಾನಿ ಮಾಡಿ ಬಳಿಕ ಅವರನ್ನು ಕೆಳಗಿಳಿಸಿದ ಇತಿಹಾಸ ಕಾಂಗ್ರೇಸ್ ಪಕ್ಷಕ್ಕಿದೆ. ಇಂದು ದೇಶದಲ್ಲಿ‌ ಕಾಂಗ್ರೇಸ್ ಮುಕ್ತವಾಗಿದ್ದು, ಕಾಂಗ್ರೇಸ್ ಏಕಾಂಕಿಯಾಗಿ ಚುನಾವಣೆ ಸ್ಪರ್ಧಿಸುವ ಅರ್ಹತೆಯನ್ನೇ ಹೊಂದಿಲ್ಲ.

    ಅಧಿಕಾರ ಹಿಡಿಯಲು ಕಾಂಗ್ರೇಸ್ ಇಂತಹ ಹಲವು ಷಡ್ಯಂತ್ರಗಳನ್ನು ಮಾಡುತ್ತಿದ್ದು, ಇದರಲ್ಲಿ ಕಾಂಗ್ರೇಸ್ ಯಾವುದೇ ಕಾರಣಕ್ಕೂ ಸಫಲವಾಗಲ್ಲ ಎಂದ ಅವರು ಕಾಂಗ್ರೆಸ್ ಕಳೆದ ಬಾರಿಯೂ ಇದೇ ರೀತಿ ಮಾಡಿದ್ದು, ದೇಶದಲ್ಲಿ ಇರುವ ಮೋದಿ ಅಲೆಯಲ್ಲಿ ಕಾಂಗ್ರೇಸ್ ಕೊಚ್ಚಿ ಹೋಗಲಿದೆ ಎಂದು ಅವರು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply