Connect with us

LATEST NEWS

ಕೆಲಸದ ಮೊದಲ ದಿನವೇ ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ

Share Information

ಜಾರ್ಖಂಡ್ ಜುಲೈ 18: ಸರಕಾರಿ ಕೆಲಸದ ಮೊದಲ ಪೋಸ್ಟಿಂಗ್ ನ ಮೊದಲ ದಿನವೇ ಲಂಚ ಪಡೆಯಲು ಹೋಗಿ ಮಹಿಳಾ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜಾರ್ಖಂಡ್‌ ರಾಜ್ಯದಲ್ಲಿ ಜೆಪಿಎಸ್‌ಸಿ ಪರೀಕ್ಷೆಯ್ಲಿ 108ನೇ ಶ್ರೇಯಾಂಕ ಪಡೆದು ಒಂದು ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್‌ ಪಡೆದುಕೊಂಡಿದ್ದ ಮಿಥಾಲಿ ಶರ್ಮ ಲಂಚ ಪಡೆಯುವಾಗ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿ.


ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೋ-ಆಪರೇಟಿವ್‌ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್‌ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮರನ್ನು ಬಂಧಿಸಿದೆ. 10 ಸಾವಿರ ಲಂಚ ಪಡೆಯುವಾಗ ಈಕೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಮಿಥಾಲಿ ಶರ್ಮ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಮೇಶ್ವರ ಪ್ರಸಾದ್‌ ಯಾದವ್‌ ಎನ್ನುವ ವ್ಯಕ್ತಿಯಿಂದ ದೂರು ದಾಖಲಾದ ಬೆನ್ನಲ್ಲಿಯೇ ಎಸಿಬಿ ಕಾರ್ಯಪ್ರವೃತ್ತವಾಗಿ ಮಿಥಾಲಿ ಶರ್ಮಳನ್ನು ಬಂಧಿಸಿದೆ.

ತನ್ನ ದೂರಿನಲ್ಲಿ, ಯಾದವ್ ಅವರು ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದಾರೆ. ಕೊಡೆರ್ಮ ವ್ಯಾಪಾರ ಮಂಡಲವು ಬೀಜ ವಿತರಣೆಯ ನೋಡಲ್ ಏಜೆನ್ಸಿಯಾಗಿದೆ. ಜೂನ್ 16 ರಂದು ಮಿಥಾಲಿ ಶರ್ಮ ಅವರು ಕಚೇರಿಯ ಪರಿಶೀಲನೆಗೆ ಆಗಮಿಸಿದರು. ನನಗೆ ಗೊತ್ತಿಲ್ಲದ ಯಾವುದೋ ವಿಚಾರವನ್ನು ಹಿಡಿದುಕೊಂಡು ನನಗೆ ಶೋಕಾಸ್‌ ನೋಟೀಸ್‌ ಜಾರಿ ಮಾಡಿದ್ದರು. ಇದನ್ನು ಕೇಳುವ ಕುರಿತಾಗಿ ನಾನು ಅವರ ಕಚೇರಿಗೆ ಹೋಗಿದ್ದೆ ಈ ವೇಳೆ ಇಲಾಖಾ ಶಿಸ್ತು ಕ್ರಮದಿಂದ ಪಾರಾಗಬೇಕಿದ್ದಲ್ಲಿ 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಾಮ್‌ಪ್ರಸಾದ್‌ ಯಾದವ್‌ ತನ್ನ ದೂರಿನಲ್ಲಿ ತಿಳಿಸಿದ್ದರು.

ಈ ದೂರಿಗೆ ಸಂಬಂಧಿಸಿದಂತೆ ಬ್ಯೂರೋ ಕಚೇರಿಯಿಂದ ಪರಿಶೀಲನೆ ಕೂಡ ನಡೆಸಲಾಗಿದೆ. ಪರಿಶೀಲನಾ ವರದಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಿಜ ಎಂದು ತಿಳಿದುಬಂದಿದೆ. ಯಾದವ್ ಅವರ ದೂರಿನ ಆಧಾರದ ಮೇಲೆ, ಶರ್ಮಾ ವಿರುದ್ಧ ಬ್ಯೂರೋದ ಹಜಾರಿಬಾಗ್ ಕಛೇರಿ ಸಂಖ್ಯೆ-05/2023 ರಲ್ಲಿ ದಿನಾಂಕ 06.07.2023 ರಂದು ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯುವ ಉದ್ದೇಶದಿಂದ ರಾಮ್‌ಪ್ರಸಾದ್‌ ಯಾದವ್‌ ನೀಡಿದ 10 ಸಾವಿರ ರೂಪಾಯಿ ಹಣವನ್ನು ಹಿಡಿದುಕೊಂಡಾಗಲೇ ಮಿಥಾಲಿ ಶರ್ಮರನ್ನು ಬಂದಿಸಲಾಗಿದೆ.


Share Information
Advertisement
Click to comment

You must be logged in to post a comment Login

Leave a Reply